ಹಮಾಸ್ ನಾಯಕನ ಹತ್ಯೆ ಕೇಸ್: ಇಸ್ರೇಲ್ ವಿರುದ್ಧ ದೊಡ್ಡ ಮಟ್ಟದಲ್ಲೇ ದಾಳಿ ನಡೆಸಲು ಇರಾನ್ ಪ್ಲ್ಯಾನ್
ತನ್ನ ನೆಲದಲ್ಲಿ ಇಸ್ಮಾಯಿಲ್ ಹನಿಯ ಅವರ ಹತ್ಯೆ ನಡೆಸಿದ್ದಕ್ಕೆ ಶೀಘ್ರವೇ ಇಸ್ರೇಲ್ ವಿರುದ್ಧ ಇರಾನ್ ದೊಡ್ಡ ಮಟ್ಟದಲ್ಲಿ ಪ್ರತೀಕಾರ ತೀರಿಸಲಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ಅಂತಾರಾಷ್ಟ್ರೀಯ ಒತ್ತಡವನ್ನು ಪರಿಗಣಿಸಿ ಇಸ್ರೇಲ್ ವಿರುದ್ಧ ತನ್ನ ದಾಳಿಯಿಂದ ಇರಾನ್ ಹಿಂದಕ್ಕೆ ಸರಿದಿದೆ ಎಂದು ಇಸ್ರೇಲ್ ಆಂತರಿಕ ವರದಿಗಳು ಹೇಳುತ್ತಿವೆ.
ಮುಂದಿನ ಗುರುವಾರದಂದು ಕದನ ವಿರಾಮ ಏರ್ಪಡಿಸುವುದಕ್ಕೆ ಮತ್ತು ಬಂದಿತರ ವಿಮೋಚನೆಗೆ ಇಸ್ರೇಲ್ ಫೆಲೆ ಸ್ತೀನ್ ನಡುವೆ ಚರ್ಚೆ ನಡೆಯಲಿದ್ದು ಅದಕ್ಕಿಂತ ಮೊದಲೇ ಇರಾನ್ ಈ ದಾಳಿ ನಡೆಸಬಹುದು ಎಂದು ಕೂಡ ಅಂದಾಜಿಸಲಾಗಿದೆ.
ಈ ದಾಳಿಗೆ ಸಂಬಂಧಿಸಿದಂತೆ ಇರಾನ್ ನಲ್ಲಿ ಭಿನ್ನಾಭಿಪ್ರಾಯ ಇದೆ ಎಂದು ಹೇಳಲಾಗುತ್ತಿದೆ. ತೀವ್ರ ಪ್ರತಿ ದಾಳಿಯ ಅಗತ್ಯ ಇಲ್ಲ ಎಂಬುದು ಅಧ್ಯಕ್ಷ ಮಸೂದ್ ಅವರ ಅಭಿಪ್ರಾಯವಾದರೆ ಕಳೆದ ಏಪ್ರಿಲ್ ನಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ಮಿಸೈಲ್ ದಾಳಿಗಿಂತ ತೀವ್ರತರವಾದ ಮತ್ತು ಹಾನಿಕಾರಕವಾದ ದಾಳಿಯನ್ನು ನಡೆಸಬೇಕು ಅನ್ನುವುದುಇರಾನ್ ಮಿಲಿಟರಿಯ ಅಭಿಪ್ರಾಯವೆಂದು ಹೇಳಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth