ವಿವಾದಾತ್ಮಕ ನಟಿ ಕಂಗನಾಗೆ ‘ರಾಹುಲ್ ಗಾಂಧಿ ಅಪಾಯಕಾರಿ ವ್ಯಕ್ತಿ’ ಅಂತೆ..!
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಂಸದೆ, ನಟಿ ಕಂಗನಾ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಹುಲ್ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ” ಎಂದು ಕಂಗನಾ ಹೇಳಿದ್ದಾರೆ.
ಹಿಂಡನ್‌ಬರ್ಗ್‌ನ ಹೊಸ ಸಂಶೋಧನಾ ವರದಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಾ ರಾಹುಲ್ ಗಾಂಧಿಯತ್ತ ಬೊಟ್ಟು ಮಾಡಿರುವ ಕಂಗನಾ, “ರಾಹುಲ್ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ. ಕಹಿ, ವಿಷಕಾರಿ ಮತ್ತು ವಿನಾಶಕಾರಿ ವ್ಯಕ್ತಿಯಾಗಿದ್ದಾರೆ. ತಾನು ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ ಈ ದೇಶವನ್ನೇ ನಾಶಪಡಿಸುವುದು ರಾಹುಲ್ ಗಾಂಧಿ ಅಜೆಂಡಾ” ಎಂದು ಆರೋಪಿಸಿದ್ದಾರೆ.
“ನಮ್ಮ ಷೇರು ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಅನುಮೋದಿತ ಹಿಂಡನ್‌ಬರ್ಗ್ ವರದಿಯು ನಿನ್ನೆ ರಾತ್ರಿ ಟುಸ್ ಪಟಾಕಿಯಾಗಿದೆ. ಅವರು ಈ ರಾಷ್ಟ್ರದ ಭದ್ರತೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಬಿಜೆಪಿ ಸಂಸದೆ ದೂರಿದ್ದಾರೆ.
“ರಾಹುಲ್ ಗಾಂಧಿ ನಿಮ್ಮ ಜೀವನದುದ್ದಕ್ಕೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿರಿ ಮತ್ತು ನೀವು ಅನುಭವಿಸುವ ರೀತಿಯಲ್ಲೇ ಈ ರಾಷ್ಟ್ರದ ಜನರ ವೈಭವ, ಬೆಳವಣಿಗೆ ಮತ್ತು ರಾಷ್ಟ್ರೀಯತೆಯನ್ನು ನೋಡಲು ಸಿದ್ಧರಾಗಿ. ಜನರು ನಿಮ್ಮನ್ನು ಎಂದಿಗೂ ತಮ್ಮ ನಾಯಕನನ್ನಾಗಿ ಮಾಡುವುದಿಲ್ಲ. ನೀವು ನಾಚಿಕೆಗೇಡಿನ ಮನುಷ್ಯ” ಎಂದು ಕಿಡಿಕಾರಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth