ಕಳಪೆ ಪ್ರದರ್ಶನ ತೋರಿದ ಶಾಲಾ ಫುಟ್ಬಾಲ್ ಆಟಗಾರನಿಗೆ ಥಳಿಸಿದ ಶಿಕ್ಷಕ: ವ್ಯಾಪಕ ಆಕ್ರೋಶ - Mahanayaka

ಕಳಪೆ ಪ್ರದರ್ಶನ ತೋರಿದ ಶಾಲಾ ಫುಟ್ಬಾಲ್ ಆಟಗಾರನಿಗೆ ಥಳಿಸಿದ ಶಿಕ್ಷಕ: ವ್ಯಾಪಕ ಆಕ್ರೋಶ

12/08/2024

ತಮಿಳುನಾಡಿನ ಸೇಲಂ ಜಿಲ್ಲೆಯ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಣ್ಣಾಮಲೈ ಎಂದು ಗುರುತಿಸಲ್ಪಟ್ಟ ಈ ಶಿಕ್ಷಕ ಹಲವಾರು ಫುಟ್ಬಾಲ್ ಆಟಗಾರರ ಪ್ರದರ್ಶನದಿಂದ ಅಸಮಾಧಾನಗೊಂಡ ನಂತರ ಅವರ ಕೆನ್ನೆಗೆ ಹೊಡೆಯುವುದು, ಒದೆಯುವುದು ಮತ್ತು ಕೂದಲನ್ನು ಎಳೆಯುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂದಹಾಗೇ ಈ ವೀಡಿಯೊ ಪ್ರಸಾರವಾದ ನಂತರ, ಸಂಗಗಿರಿ ಜಿಲ್ಲಾ ಶಿಕ್ಷಣ ಅಧಿಕಾರಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.


Provided by

ಇದು ಅಣ್ಣಾಮಲೈ ಅವರನ್ನು ಅಮಾನತುಗೊಳಿಸಲು ಕಾರಣವಾಯಿತು. ಇನ್ನು ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವರ್ಷದ ಮಾರ್ಚ್ ನಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ, ತೆಲಂಗಾಣದ ಸರ್ಕಾರಿ ಕಾಲೇಜಿನ ಏಳು ವಿದ್ಯಾರ್ಥಿಗಳನ್ನು ಕಾಲೇಜು ಹಾಸ್ಟೆಲ್‌ನಲ್ಲಿ 21 ವರ್ಷದ ಪದವಿ ವಿದ್ಯಾರ್ಥಿಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿತ್ತು.

ಸಂತ್ರಸ್ತನನ್ನು ವೆಂಕಟ್ ಎಂದು ಗುರುತಿಸಲಾಗಿದ್ದು, ಆರೋಪಿ ಮತ್ತು ಅವನ ಎಲ್ಲಾ ಸಹಪಾಠಿಗಳು ಥಳಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳಲ್ಲಿ ಅಪ್ರಾಪ್ತ ವಯಸ್ಕನೂ ಸೇರಿದ್ದಾನೆ. ತೆಲಂಗಾಣದ ನಿಜಾಮಾಬಾದ್ ನಲ್ಲಿ ಈ ಘಟನೆ ನಡೆದಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ