ಸೈಬರ್ ವಂಚಕರ ಬಗ್ಗೆ ಹೊಸ ವರ್ಷ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ: ಅನುಪಮ್ ಅಗರ್ವಾಲ್
ಮಂಗಳೂರು: ಹೊಸ ವರ್ಷ ಸಂದರ್ಭದಲ್ಲಿ ಸಾರ್ವಜನಿಕರು ಸೈಬರ್ ವಂಚಕರ(Cyber Crime )ಬಗ್ಗೆ ಎಚ್ಚರಿಕೆ ವಹಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.
ಹೊಸ ವರ್ಷ(New Year– 2025)ದ ಸಂದರ್ಭವನ್ನ ಬಳಸಿಕೊಂಡು ಸೈಬರ್ ವಂಚಕರು ಸಾರ್ವಜನಿಕರನ್ನು ವಂಚಿಸುವ ಸಾಧ್ಯತೆ ಇದೆ ಎಂದಿರುವ ಅವರು, 2025ನೇ ಹೊಸ ವರ್ಷಕ್ಕೆ ಶುಭಾಶಯವನ್ನು ಕೋರುವ ಲಿಂಕ್, ಎಪಿಕೆ ಫೈಲ್ ಗಳನ್ನು ಮೊಬೈಲ್ ಗೆ ಕಳುಹಿಸಿ ಮೊಬೈಕ್ ಹ್ಯಾಕ್ ಮಾಡುವ ಸಾಧ್ಯತೆ ಇದೆ.
ಸೈಬರ್ ವಂಚಕರು ಮೊಬೈಲ್ ಹ್ಯಾಕ್ ಮಾಡುವ ಮೂಲಕ ಆ ಮೊಬೈಲ್ ನಿಂದ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್ ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡಬಹುದು ಎಂದು ತಿಳಿಸಿದ್ದಾರೆ.
ಹೊಸ ವರ್ಷ ಶುಭಾಶಯಗ ಕೋರುವ ಯಾವುದೇ ಎಪಿಕೆ ಫೈಲ್ ಗಳನ್ನು ವಾಟ್ಸಾಪ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸ್ವೀಕರಿಸಿದರೆ ಅದನ್ನು ಡಿಲೀಟ್ ಮಾಡಬೇಕು.
ಎಪಿಕೆ(APK) ಫೈಲ್ ಗಳನ್ನು ವಾಟ್ಸಾಪ್ ಗ್ರೂಪ್ ಗೆ ಪರಿಚಿತ ವಾಟ್ಸಾಪ್ ಸಂಖ್ಯೆಗಳಿಂದಲೇ ಪೋಸ್ಟ್ ಮಾಡಿದ್ದರೆ, ಅಂತಹ ವಾಟ್ಸಾಪ್ ಗ್ರೂಪ್ ನ ಅಡ್ಮೀನ್ ಗಳು ಫೈಲ್ ಗಳನ್ನು ಡಿಲೀಟ್ ಮಾಡಬೇಕು. ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದರೆ, 1930ಗೆ ಕರೆ ಮಾಡಬೇಕು. ಅಥವಾ www.cybercrime.gov.in ನಲ್ಲಿ ದೂರು ಸಲ್ಲಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: