ಕಾಫಿನಾಡಲ್ಲಿ ಕಾಡಾನೆ ಹಿಂಡು ಬೀಟಮ್ಮ ಆಂಡ್ ಟೀಂ ರೌಂಡ್ಸ್ | ಆನೆಗಳ ಓಡಾಟದ ಹಿಂದೆ ಬಿದ್ದ ಡ್ರೋನ್ ಕ್ಯಾಮರಾ - Mahanayaka

ಕಾಫಿನಾಡಲ್ಲಿ ಕಾಡಾನೆ ಹಿಂಡು ಬೀಟಮ್ಮ ಆಂಡ್ ಟೀಂ ರೌಂಡ್ಸ್ | ಆನೆಗಳ ಓಡಾಟದ ಹಿಂದೆ ಬಿದ್ದ ಡ್ರೋನ್ ಕ್ಯಾಮರಾ

elephants 1
14/11/2024

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆ ಹಿಂಡು ಬೀಟಮ್ಮ ಆಂಡ್ ಟೀಂ ರೌಂಡ್ಸ್ ಹಾಕುತ್ತಿದೆ. ಹೀಗಾಗಿ ಆನೆಗಳ ಓಡಾಟದ ಹಿಂದೆ ಡ್ರೋನ್ ಕ್ಯಾಮರಾ ಬಿದ್ದಿದ್ದು, ಆನೆ ಸಂಚರಿಸುವ ಮಾರ್ಗ, ಚಲನ–ವಲನದ ಮೇಲೆ ಡ್ರೋನ್ ಕಣ್ಗಾವಲು ಇರಿಸಲಾಗಿದೆ.

ಡ್ರೋನ್ ನಲ್ಲಿ ಆನೆಗಳು ಸಾಗೋ ಟ್ರ್ಯಾಕ್ ನ್ನು ಅರಣ್ಯ ಇಲಾಖೆ ಪತ್ತೆ ಮಾಡುತ್ತಿದೆ. ಆನೆ ಟಾಸ್ಕ್ ಫೋರ್ಸ್ ಹಾಗೂ ರಿವರ್ಸ್ ಫಾರಸ್ಟ್ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಸಾರ್ವಜನಿಕರ ರಕ್ಷಣೆಗೆ ಮುಂದಾಗಿದ್ದಾರೆ.

ಹಿರಿಯ ಅಧಿಕಾರಿಗಳು ಬೀಟಮ್ಮ ಟೀಂ ಸಾಗೋ ಮಾರ್ಗದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆನೆ ಹೋಗೋ ಮಾರ್ಗದಲ್ಲಿ ಜನ, ಕಾರ್ಮಿಕರಿದ್ದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

24 ಗಂಟೆಯೂ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಕಾಡಾನೆ ಹಿಂಡಿನ ಬೆನ್ನತ್ತಿದ್ದಾರೆ. 17 ಕಾಡಾನೆ ಹಿಂಡು ವಾರದಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಬೀಡುಬಿಟ್ಟಿವೆ.

ಆಲ್ದೂರು, ಚಿಕ್ಕಮಗಳೂರು ನಗರದಿಂದ 7–8 ಕಿ.ಮೀ. ಸುತ್ತ ರೌಂಡ್ಸ್ ಹೊಡೆಯುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಟಾಸ್ಕ್ ಪೋರ್ಸ್ ಸಿಬ್ಬಂದಿಗಳು ಆನೆಗಳ ಮೇಲೆ ಕಣ್ಗಾವಲು ಇರಿಸಿದ್ದು, ಕಾಡಿನಲ್ಲಿ ಆನೆಗಳು ವಿಶ್ರಾಂತಿ ಪಡೆದುಕೊಳ್ಳುತ್ತಿರುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ