ನೋ ಛಾನ್ಸ್: ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಸಬೇಕೆಂಬ ವೈದ್ಯರ ಬೇಡಿಕೆ ತಿರಸ್ಕರಿಸಿದ ಬಂಗಾಳ ಸರ್ಕಾರ
ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ನಡೆದ ಬಿಕ್ಕಟ್ಟನ್ನು ಕೊನೆಗೊಳಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಭೆ ನಡೆಸಬೇಕೆಂದು ಪ್ರತಿಭಟನಾ ನಿರತ ವೈದ್ಯರ ಬೇಡಿಕೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ತಿರಸ್ಕರಿಸಿದೆ. ಈ ಬೇಡಿಕೆಗಳಲ್ಲಿ ಸಭೆಯ ನೇರ ಪ್ರಸಾರ ಮತ್ತು 30 ಸದಸ್ಯರ ಪ್ರತಿನಿಧಿಗಳ ತಂಡದ ಉಪಸ್ಥಿತಿಯೂ ಸೇರಿತ್ತು.
ಬುಧವಾರ ರಾತ್ರಿ ಹೇಳಿಕೆಯೊಂದರಲ್ಲಿ, ರಾಜ್ಯದ ಆರೋಗ್ಯ ಸಚಿವರಾದ ಚಂದ್ರಿಮಾ ಭಟ್ಟಾಚಾರ್ಯ ಅವರು, ಸರ್ಕಾರವು ವೈದ್ಯರೊಂದಿಗೆ ಚರ್ಚೆಗೆ ಮುಕ್ತವಾಗಿದೆ. ಜೊತೆಗೆ ರಾಜಕೀಯ ಶಕ್ತಿಗಳು ಆಂದೋಲನಗಳ ಮೇಲೆ ಪ್ರಭಾವ ಬೀರಬಹುದು ಎಂದು ಸೂಚಿಸಿದ್ದಾರೆ.
ಇನ್ನು ವೈದ್ಯರು ಸಚಿವರ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿದ್ದು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು.
ಸೆಪ್ಟೆಂಬರ್ 10 ರ ಸಂಜೆಯೊಳಗೆ ತಮ್ಮ ಕರ್ತವ್ಯವನ್ನು ಪುನರ್ ಆರಂಭಿಸುವಂತೆ ಪ್ರತಿಭಟನಾ ನಿರತ ವೈದ್ಯರಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶದ ಮಹತ್ವವನ್ನು ಉಲ್ಲೇಖಿಸಿ, ಸರ್ಕಾರವು ಮಂಗಳವಾರ ರಾಜ್ಯ ಸಚಿವಾಲಯವಾದ ನಬಣ್ಣದಲ್ಲಿ ನಡೆದ ಸಭೆಗೆ ವೈದ್ಯರನ್ನು ಆಹ್ವಾನಿಸಿತ್ತು ಮತ್ತು 12 ರಿಂದ 15 ಸದಸ್ಯರ ನಿಯೋಗವನ್ನು ಕಳುಹಿಸುವಂತೆ ಕೇಳಿಕೊಂಡಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth