18 ಸ್ಪಾ ಕೇಂದ್ರಗಳ ಮೇಲೆ ಪೊಲೀಸರ ದಾಳಿ: ವೇಶ್ಯಾವಾಟಿಕೆ ದಂಧೆ ಪತ್ತೆ, 68 ಮಂದಿಯ ಬಂಧನ
ಭೋಪಾಲ್ ಪೊಲೀಸರು ನಗರದಾದ್ಯಂತ ವೇಶ್ಯಾವಾಟಿಕೆಯಲ್ಲಿ ತೊಡಗಿರುವ 18 ಸ್ಪಾ ಕೇಂದ್ರಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಸಮಯದಲ್ಲಿ, ಪೊಲೀಸರು ಹಲವಾರು ಪುರುಷರು ಮತ್ತು ಮಹಿಳೆಯರನ್ನು ಬಂಧಿಸಿದ್ದಾರೆ.
ನಾಲ್ಕು ಸ್ಥಳಗಳಲ್ಲಿ 250 ಪೊಲೀಸರು ದಾಳಿ ನಡೆಸಿದ್ದಾರೆ. ರಾಜ್ಯ ರಾಜಧಾನಿಯಲ್ಲಿನ ಸ್ಪಾ ಕೇಂದ್ರಗಳಲ್ಲಿ ನಡೆಸಿದ ಅನೇಕ ದಾಳಿಗಳಿಂದ ಪೊಲೀಸರು 33 ಪುರುಷರು ಮತ್ತು 35 ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.
ಕೆಲವು ಸ್ಪಾ ಕೇಂದ್ರಗಳು ವೇಶ್ಯಾವಾಟಿಕೆಯಲ್ಲಿ ತೊಡಗಿವೆ ಎಂದು ಪೊಲೀಸರಿಗೆ ದೂರುಗಳು ಬಂದ ನಂತರ ಈ ಅನಿರೀಕ್ಷಿತ ದಾಳಿಗಳು ನಡೆದಿದೆ.
ಪೊಲೀಸರ ಪ್ರಕಾರ, ನಗರದ ಕೆಲವು ಸ್ಪಾ ಕೇಂದ್ರಗಳ ಆವರಣದಲ್ಲಿ ವೇಶ್ಯಾವಾಟಿಕೆ ಸೇರಿದಂತೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿಬಂದಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj