ಪತ್ನಿಯ ಮುಂದೆಯೇ ‘ಅಂಕಲ್’ಎಂದು ಕರೆದಿದ್ದಕ್ಕೆ ಅಂಗಡಿ ಮಾಲೀಕನಿಗೆ ಥಳಿಸಿದ ವ್ಯಕ್ತಿ
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತನ್ನ ಪತ್ನಿಯ ಮುಂದೆ ತನ್ನನ್ನು ‘ಅಂಕಲ್’ ಎಂದು ಕರೆದಿದ್ದಕ್ಕಾಗಿ ಅಂಗಡಿಯವನೊಬ್ಬನನ್ನು ಗ್ರಾಹಕರೊಬ್ಬರು ಥಳಿಸಿದ ಘಟನೆ ನಡೆದಿದೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಭೋಪಾಲ್‌ನ ಜಟಖೇಡಿ ಪ್ರದೇಶದಲ್ಲಿ ಸೀರೆ ಅಂಗಡಿಯ ಮಾಲೀಕರಾದ ವಿಶಾಲ್ ಶಾಸ್ತ್ರಿ, ತನ್ನ ಔಟ್ಲೆಟ್ ನಲ್ಲಿ ಗ್ರಾಹಕರು ಮತ್ತು ಆತನ ಸ್ನೇಹಿತರು ತನ್ನನ್ನು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರೋಹಿತ್ ಎಂದು ಗುರುತಿಸಲಾದ ಆರೋಪಿ ತನ್ನ ಪತ್ನಿಯೊಂದಿಗೆ ಶನಿವಾರ ವಿಶಾಲ್ ಅಂಗಡಿಗೆ ಸೀರೆ ಖರೀದಿಸಲು ಬಂದಿದ್ದ. ದಂಪತಿ ದೀರ್ಘಕಾಲದವರೆಗೆ ಹಲವಾರು ಸೀರೆಗಳನ್ನು ಪರಿಶೀಲಿಸಿದ್ರೂ ಯಾವುದನ್ನೂ ಆಯ್ಕೆ ಮಾಡಲಿಲ್ಲ.
ನಂತರ ಅಂಗಡಿ ಮಾಲೀಕ ವಿಶಾಲ್, ಯಾವ ಬೆಲೆಯ ಸೀರೆಗಳನ್ನು ಖರೀದಿಸಲು ಬಯಸುತ್ತೀರಿ ಎಂದು ರೋಹಿತ್ ಅವರತ್ರ ಕೇಳಿದಾಗ 1,000 ಒಳಗಡೆ ಎಂದು ರೋಹಿತ್ ಉತ್ತರಿಸುತ್ತಾರೆ.
ಆವಾಗ ಅಂಗಡಿಯವ “ಅಂಕಲ್, ನಾನು ನಿಮಗೆ ಇತರ ಶ್ರೇಣಿಗಳಲ್ಲಿಯೂ ಸೀರೆಗಳನ್ನು ತೋರಿಸುತ್ತೇನೆ” ಎಂದು ಹೇಳಿದಾಗ ರೋಹಿತ್ ಗೆ ಕೋಪ ನೆತ್ತಿಗೇರುತ್ತದೆ. ಆಗ ವಾಗ್ವಾದ ನಡೆದು ಹೊಡೆದಾಟ ನಡೆದಿದೆ.
ರೋಹಿತ್ ತನ್ನ ಪತ್ನಿಯೊಂದಿಗೆ ಅಂಗಡಿಯಿಂದ ಹೊರಟುಹೋದ. ಸ್ವಲ್ಪ ಸಮಯದ ನಂತರ, ಅವನು ಕೆಲವು ಜನರೊಂದಿಗೆ ಅಂಗಡಿಗೆ ಮರಳಿದನು, ಅವರು ವಿಶಾಲ್ ಅವರನ್ನು ಅಂಗಡಿಯಿಂದ ಹೊರಗೆ ರಸ್ತೆಗೆ ಎಳೆದೊಯ್ದು ಕೋಲುಗಳು, ಬೆಲ್ಟ್ ಗಳಿಂದ ಹೊಡೆದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೆಲವು ಗಾಯಗಳಿಂದ ಬಳಲುತ್ತಿದ್ದ ವಿಶಾಲ್, ಹತ್ತಿರದ ಪೊಲೀಸ್ ಠಾಣೆಯನ್ನು ತಲುಪಿ ರೋಹಿತ್ ಮತ್ತು ಆತನ ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದಾರೆ. ಆತನನ್ನು ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೀಶ್ ರಾಜ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ.
ರೋಹಿತ್ ಮತ್ತು ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj