ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್ ರನ್ನು ಗುರಿಯಾಗಿಸಿಕೊಂಡ ಟ್ರಂಪ್
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳ ಮೊದಲು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೆರೊಲಿನಾದ ಕಿನ್ ಸ್ಟನ್‌ನಲ್ಲಿ ರ್ಯಾಲಿ ನಡೆಸಿದರು. ಇದೇ ವೇಳೆ ಅವರು ಕಮಲಾ ಹ್ಯಾರಿಸ್ ಅವರನ್ನು ಗುರಿಯಾಗಿಸಿಕೊಂಡು “ಚುನಾವನೇಯಲ್ಲಿ ಚುನಾಯಿತರಾದರೆ ಹ್ಯಾರಿಸ್ ಗಡಿಯನ್ನು ತೆರೆಯುತ್ತಾರೆ.
ವಲಸಿಗರು, ಗ್ಯಾಂಗ್ ಗಳು ಮತ್ತು ಅಪರಾಧಿಗಳ ಒಳಹರಿವಿಗೆ ಅವಕಾಶ ನೀಡುತ್ತಾರೆ” ಎಂದು ಆರೋಪಿಸಿದ್ದಾರೆ. ಹ್ಯಾರಿಸ್ ರಿಗೆ ದೂರದೃಷ್ಟಿ ಇಲ್ಲ. ಆಲೋಚನೆಗಳಿಲ್ಲ ಮತ್ತು ಪರಿಹಾರಗಳಿಲ್ಲ. ಅವರ ಏಕೈಕ ಸಂದೇಶವೆಂದರೆ ವಿವಿಧ ಸಮಸ್ಯೆಗಳಿಗೆ ಅವರನ್ನು ದೂಷಿಸುವುದು ಎಂದು ಅವರು ಹೇಳಿದರು.
ಇನ್ನು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ಕಮಲಾ ಹೇಳುವುದೆಲ್ಲವೂ ಸುಳ್ಳು. ಅವರಿಗೆ ದೂರದೃಷ್ಟಿ ಇಲ್ಲ. ಆಲೋಚನೆಗಳಿಲ್ಲ ಮತ್ತು ಪರಿಹಾರಗಳಿಲ್ಲ ಎಂದು ದೂಷಿಸಿದ್ದಾರೆ.
“ಅವರು ಎಂದಾದರೂ ಗೆದ್ದರೆ, ಅವರು ಮೊದಲ ದಿನವೇ ಗಡಿಯನ್ನು ತೆರೆಯುತ್ತಾರೆ. ಏಕೆ ಎಂದು ನನಗೆ ಗೊತ್ತಿಲ್ಲ. ಏಕೆ ಎಂದು ಯಾರಿಗೂ ತಿಳಿದಿಲ್ಲ. ನಾನು ಗೆದ್ದರೆ, ಅಮೆರಿಕದ ಜನರು ಮತ್ತೆ ಈ ದೇಶದ ಆಡಳಿತಗಾರರಾಗುತ್ತಾರೆ. ಕಮಲಾ ತನ್ನ ಪ್ರತಿಜ್ಞೆಯನ್ನು ಉಲ್ಲಂಘಿಸಿದ್ದಾರೆ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj