ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಅರೆಸ್ಟ್ - Mahanayaka

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಅರೆಸ್ಟ್

iqbal kaskar
23/06/2021

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬುಧವಾರ ಬಂಧಿಸಿದೆ.

ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ಪ್ರೊಡಕ್ಷನ್ ವಾರಂಟ್‌ ನಲ್ಲಿ ಇಕ್ಬಾಲ್ ಕಸ್ಕರ್ ನನ್ನು  ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ,  ಮಾದಕ ವಸ್ತುಗಳ ಸರಕುಗಳನ್ನು ಎನ್‌ ಸಿಬಿ ವಶಕ್ಕೆ ಪಡೆದಿದ್ದು, ಅದನ್ನು ಪಂಜಾಬ್ ಜನರು ಕಾಶ್ಮೀರದಿಂದ ಮುಂಬೈಗೆ ಬೈಕ್‌ ನಲ್ಲಿ ಸಾಗಿಸಲಾಗುತ್ತಿತ್ತು ಎನ್ನುವ ಮಾಹಿತಿ ಈ ವೇಳೆ ದೊರೆತಿತ್ತು.

ಇನ್ನೂ ಈ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಶಾಮೀಲಾಗಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎನ್ ಸಿಬಿ ಕಸ್ಕರ್ ನನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ