ಜಾಲಿ ರೈಡ್:  ಬೈಕ್ ಸಹಿತ ಯುವಕನನ್ನು ವಶಕ್ಕೆ ಪಡೆದ ಪೊಲೀಸರು! - Mahanayaka

ಜಾಲಿ ರೈಡ್:  ಬೈಕ್ ಸಹಿತ ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

jolly ride in bike
22/04/2022

ಚಾಮರಾಜನಗರ:  ಪ್ರೇಯಸಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಎದುರಾಗಿ ಕೂರಿಸಿಕೊಂಡು, ರಸ್ತೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಜಾಲಿ ರೈಡ್ ಮಾಡಿದ್ದ ಸವಾರನನ್ನು ಬೈಕ್ ಸಹಿತವಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿ.ಸ್ವಾಮಿ ಬೈಕ್ ಚಾಲನೆ ಮಾಡುತ್ತಿದ್ದ ಯುವಕನಾಗಿದ್ದು, ಎಪ್ರಿಲ್ 21ರಂದು ಗುಂಡ್ಲುಪೇಟೆ ರಸ್ತೆಯ ಯಡಪುರ ಗ್ರಾಮಸ ಬಳಿ ತನ್ನ ಪಲ್ಸರ್ ಬೈಕ್ ನಲ್ಲಿ ಯುವತಿಯನ್ನು ಕೂರಿಸಿಕೊಂಡು ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಬೈಕ್ ಚಲಾಯಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಚಾಮರಾಜನಗರ ಠಾಣೆ ಪೊಲೀಸರು ಬೈಕ್ ಸವಾರನನ್ನು ಪತ್ತೆ ಹಚ್ಚಲು ಕ್ರಮಕೈಗೊಂಡಿದ್ದು, ಬೈಕ್ ನಂಬರ್ ಪರಿಶೀಲಿಸಿ ಯುವಕನನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಕುಡಿಯೋದು ಸೇದುವುದು ತಪ್ಪಾದರೆ, ಅನುಮತಿ ನೀಡಿರುವ ಸರ್ಕಾರ ಸರಿಯೇ? | ನಟ ಉಪೇಂದ್ರ ಪ್ರಶ್ನೆ

ಧಮ್ ಇದ್ರೆ, ಎಸ್‌ ಡಿಪಿಐ, ಆರ್‌ಎಸ್‌ಎಸ್, ಬಜರಂಗಳವನ್ನು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲ್

ಸ್ವಲ್ಪವಾದರೂ ಗಂಡಸ್ತನ ತೋರಿಸಿ: ಪ್ರಮೋದ್ ಮುತಾಲಿಕ್ ಆಕ್ರೋಶ

ಕರ್ನಾಟಕದಲ್ಲೂ ಪೊರಕೆ ಬೀಸುತ್ತಾರಾ ಕೇಜ್ರಿವಾಲ್: 0% ಸರ್ಕಾರದ ಭರವಸೆ!

ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಬೈಕ್ ನಲ್ಲಿ ಜಾಲಿ ರೈಡ್: ವಿಡಿಯೋ ವೈರಲ್

ಇತ್ತೀಚಿನ ಸುದ್ದಿ