ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆ ಎಂದು ಬೈಕ್ ಕೊಂಡು ಹೋದವ ಮರಳಿ ಬರಲಿಲ್ಲ! - Mahanayaka

ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆ ಎಂದು ಬೈಕ್ ಕೊಂಡು ಹೋದವ ಮರಳಿ ಬರಲಿಲ್ಲ!

02/11/2020

ಉಡುಪಿ: ಬೈಕ್ ನಲ್ಲಿ ಟೆಸ್ಟ್ ಡ್ರೈವ್ ಮಾಡುತ್ತೇನೆ ಎಂದು ಹೋದವ ಮತ್ತೆ ವಾಪಸ್ ಬರಲೇ ಇಲ್ಲ. ಈ ಘಟನೆ ನಡೆದಿರುವುದು ಮಣಿಪಾಲ ಲಕ್ಷ್ಮೀಂದ್ರನಗರದ ನ್ಯೂ ಮಣಿಪಾಲ್‌ ಬಜಾರಿನಲ್ಲಿ.Provided by

ಬೈಕ್ ಖರೀದಿಸುತ್ತೇನೆ ಎಂದು ಬಂದ ವ್ಯಕ್ತಿಯೊಬ್ಬ ತನ್ನನ್ನು ಗಣೇಶ್ ಉದ್ಯಾವರ ಎಂಬ ಹೆಸರಿನಿಂದ ಬಜಾರ್ ಸಿಬ್ಬಂದಿ ಜೊತೆ ಪರಿಚಯಿಸಿಕೊಂಡಿದ್ದಾನೆ.  ಬಜಾರ್ ನ ಒಳಗೆ ಬೈಕ್ ಗಳನ್ನು ನೋಡಿ ಬಳಿಕ ಟಿವಿಎಸ್  ವಿಕ್ಟರ್ ಬೈಕ್ ನೋಡಿ, ನಾನು ಇದರಲ್ಲಿ ಟೆಸ್ಟ್ ಡ್ರೈವ್ ಮಾಡಿ ನೋಡುತ್ತೇನೆ ಎಂದು ಬೈಕ್ ಹತ್ತಿ ಹೋದ ವ್ಯಕ್ತಿಯ ಪತ್ತೆಯೇ ಇಲ್ಲ.


ಬೈಕ್ ಕಳ್ಳ ಸಿನಿಮೀಯ ಶೈಲಿಯಲ್ಲಿ ಈ ಕಳ್ಳತನ ಮಾಡಿದ್ದಾನೆ. ಟೆಸ್ಟ್ ಡ್ರೈವ್ ಮಾಡಲು ಇನ್ನು ಬೈಕ್ ಕೇಳಿದರೆ, ಶೋರೂಂ ಸಿಬ್ಬಂದಿ ಬಹಳ ಜಾಗೃತರಾಗಿರಬೇಕಿದೆ. ಈ ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಇತ್ತೀಚಿನ ಸುದ್ದಿ