ಬಿಜೆಪಿಗೆ ಕೇಜ್ರಿವಾಲ್ ಟಾರ್ಗೆಟ್: ಕೇಜ್ರಿ ಕಟೌಟನ್ನು ಹಿಡಿದು ಕಮಲ ಅಭ್ಯರ್ಥಿಯಿಂದ ಭಿನ್ನ ಪ್ರಚಾರ

ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಶಿಷ್ಟ ರೀತಿಯಲ್ಲಿ ಗುರಿಯಾಗಿಸಿಕೊಂಡು ಬಿಜೆಪಿಯು ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಯಮುನಾ ನದಿ ಕೇಂದ್ರ ಸ್ಥಾನವನ್ನು ಪಡೆದುಕೊಂಡಿದೆ. ಶನಿವಾರ ಬೆಳಿಗ್ಗೆ, ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಕೇಜ್ರಿವಾಲ್ ಅವರ ಕಟೌಟ್ ಅನ್ನು ಹೊತ್ತು ಯಮುನಾ ನದಿಯಲ್ಲಿ ದೋಣಿಯಲ್ಲಿ ಸವಾರಿ ಮಾಡಿದರು.
ಈ ಕಟೌಟ್ ನಲ್ಲಿ, ಕೇಜ್ರಿವಾಲ್ ಕ್ಷಮೆಯಾಚಿಸುವ ಸನ್ನೆಯಲ್ಲಿ (ಎರಡೂ ಕಿವಿಗಳನ್ನು ಹಿಡಿದು) ಪೋಸ್ಟರ್ ನಲ್ಲಿ “ಮೈ ಫೇಲ್ ಹೋ ಗಯಾ, ಮುಜೆ ವೋಟ್ ಮ್ಯಾಟ್ ದೇನಾ, 2025 ತಕ್ ಮೇ ಯಮುನಾ ಸಾಫ್ ನಯೀ ಕರ್ ಪಾಯಾ (ನಾನು ವಿಫಲನಾಗಿದ್ದೇನೆ) ಎಂಬ ಘೋಷಣೆಯನ್ನು ಕಾಣಬಹುದು. ನನಗೆ ಮತ ಹಾಕಬೇಡಿ- 2025 ರ ವೇಳೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಬರೆಯಲಾಗಿದೆ.
ಬಿಜೆಪಿ ನಾಯಕ ಮಾಧ್ಯಮಗಳ ಮುಂದೆ ಗಂಗಾ ನದಿಯಲ್ಲಿ ಕಟೌಟ್ ಅನ್ನು ಪದೇ ಪದೇ ಮುಳುಗಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರ್ವೇಶ್ ವರ್ಮಾ, “ನಾವು ಯಮುನಾ ನದಿಯ ಎಲ್ಲಾ ನೀರನ್ನು ಸ್ವಚ್ಛಗೊಳಿಸಬಹುದು. ಅದನ್ನು ಸ್ವಚ್ಛಗೊಳಿಸುವುದು ರಾಕೆಟ್ ವಿಜ್ಞಾನವಲ್ಲ” ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj