ದಿಲ್ಲಿ ಎಲೆಕ್ಷನ್: 27 ವರ್ಷಗಳ ವನವಾಸದ ಬಳಿಕ ದೆಹಲಿಯಲ್ಲಿ ಪುನರಾಗಮನಕ್ಕೆ ಬಿಜೆಪಿ ಸಜ್ಜು; ಎಎಪಿಗೆ ಭಾರಿ ಹಿನ್ನಡೆ - Mahanayaka

ದಿಲ್ಲಿ ಎಲೆಕ್ಷನ್: 27 ವರ್ಷಗಳ ವನವಾಸದ ಬಳಿಕ ದೆಹಲಿಯಲ್ಲಿ ಪುನರಾಗಮನಕ್ಕೆ ಬಿಜೆಪಿ ಸಜ್ಜು; ಎಎಪಿಗೆ ಭಾರಿ ಹಿನ್ನಡೆ

08/02/2025


Provided by

2025 ರ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಗಿಂತ ಮುಂದಿರುವ ಬಿಜೆಪಿ ಪಕ್ಷವು ದೆಹಲಿಯಲ್ಲಿ ತನ್ನ 27 ವರ್ಷಗಳ ವನವಾಸವನ್ನು ಕೊನೆಗೊಳಿಸಲು ಸಜ್ಜಾಗಿದೆ. ಈ ಫಲಿತಾಂಶವು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಜನಾಭಿಪ್ರಾಯ ಸಂಗ್ರಹವಾದಂತಾಹುತ್ತದೆ. ಆಮ್ ಆದ್ಮಿಪಕ್ಷವು ಚುನಾವಣೆಗೆ ಮುಂಚಿತವಾಗಿ ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪಗಳನ್ನು ಎದುರಿಸಿತ್ತು.


Provided by

ಇಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, 70 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಬಹುಮತದ ಗಡಿಯನ್ನು ದಾಟಿದೆ ಎಂದು ಆರಂಭಿಕ ಮುನ್ನಡೆಗಳು ತೋರಿಸಿವೆ. 70 ಸ್ಥಾನಗಳಲ್ಲಿ ಕೇಸರಿ ಪಕ್ಷ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಎಪಿ 21 ಸ್ಥಾನಗಳಲ್ಲಿ ಹಿಂದುಳಿದಿದೆ. ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿ ಮೂರನೇ ಸ್ಥಾನದಲ್ಲಿದೆ.

ಎಎಪಿಗೆ ದೊಡ್ಡ ಹೊಡೆತವೇನೆಂದ್ರೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿಯ ಪ್ರಮುಖ ಕ್ಷೇತ್ರವಾದ ನವದೆಹಲಿಯಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. ಮುಖ್ಯಮಂತ್ರಿ ಅತಿಶಿ ಮತ್ತು ಕೇಜ್ರಿವಾಲ್ ಅವರಲ್ಲದೇ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಕ್ರಮವಾಗಿ ಕಲ್ಕಾಜಿ ಮತ್ತು ಜಂಗ್ಪುರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ