ಇನ್ಮುಂದೆ ಕಾಲು ಮುಟ್ಟಿ ನಮಸ್ಕರಿಸುವ ಸಂಪ್ರದಾಯ ಬೇಡ: ಬಿಜೆಪಿ ಸಂಸದರಿಂದ ಪ್ರಕಟಣೆ
ಕಾಲು ಮುಟ್ಟಿ ನಮಸ್ಕರಿಸುವ ಸಂಪ್ರದಾಯವನ್ನು ಮಧ್ಯಪ್ರದೇಶದ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಡಾ.ವೀರೇಂದ್ರ ಕುಮಾರ್ ಅವರು ನಿಷೇಧಿಸಿದ್ದಾರೆ. ತನ್ನ ಕ್ಷೇತ್ರದ ಕಚೇರಿಯಲ್ಲಿ ಈ ಬಗೆಯ ಸಂಪ್ರದಾಯಕ್ಕೆ ಅವರು ವಿದಾಯ ಕೋರಿದ್ದಾರೆ. ಯಾರಾದರೂ ಹಾಗೆ ನಮಸ್ಕರಿಸಿದರೆ ಅವರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ರಾಜಕಾರಣದಲ್ಲಿ ಕಾಲು ಮುಟ್ಟಿ ನಮಸ್ಕರಿಸುವುದು ಒಂದು ರೂಢಿಯಂತೆ ಜಾರಿಯಲ್ಲಿರುವ ಹೊರತಾಗಿಯೂ ಸಚಿವರ ಈ ಎಚ್ಚರಿಕೆ ಕುತೂಹಲಕಾರಿಯಾಗಿದೆ.
ಇವರು ರಾಜಕೀಯದಲ್ಲಿ ಸೋತವರೆ ಅಲ್ಲ. 1996ರಲ್ಲಿ ಸಾಗರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ವೀರೇಂದ್ರ ಕುಮಾರ್ ಅವರು ಅಲ್ಲಿಂದ ಹಿಂತಿರುಗಿ ನೋಡಿಲ್ಲ. ಕೇಂದ್ರ ಸಚಿವರಲ್ಲಿ ಅತ್ಯಂತ ಭಿನ್ನ ಎಂದು ಗುರುತಿಸಿಕೊಂಡವರು ಇವರು. ಕೇಂದ್ರ ಸಚಿವರಿಗೆ ಅತೀವ ಭದ್ರತೆ ಇರುವುದರ ಹೊರತಾಗಿಯೂ ಇವರು ಆ ಎಲ್ಲ ಭದ್ರತೆಯನ್ನು ತಿರಸ್ಕರಿಸಿ ಸಾದಾ ಮನುಷ್ಯನಂತೆ ಎಲ್ಲೆಡೆ ಸಂಚರಿಸುತ್ತಾರೆ. ಜನರೊಂದಿಗೆ ಸಹಜವಾಗಿ ಬೆರೆಯುವುದಕ್ಕೂ ಇವರು ಹಿಂಜರಿಯುತ್ತಿಲ್ಲ. ತಮ್ಮ ಅಧಿಕೃತ ವಾಹನವನ್ನು ಅವರು ಬಹಳ ಕಡಿಮೆ ಬಳಸುತ್ತಾರೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj