ಬಿಜೆಪಿ ಶಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿದ ರೈತರು | ಕಾರಣ ಏನು ಗೊತ್ತಾ?
ಚಂಡೀಗಡ: ಕೃಷಿ ಕಾಯ್ದೆ ವಿರುದ್ಧ ಹೋರಾಡುತ್ತಿರುವ ರೈತರು ಬಿಜೆಪಿ ಶಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ಶಾಸಕರ ಮೇಲೆ ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಶಾಸಕ ಮಾತನಾಡಲು ಬಂದ ಸಂದರ್ಭದಲ್ಲಿ ಆಕ್ರೋಶಿತ ರೈತರು, ಅಬೋರ್ ಕ್ಷೇತ್ರದ ಅರುಣ್ ನಾರಂಗ್ ನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಪೊಲೀಸರು ತಕ್ಷಣವೇ ಶಾಸಕರನ್ನು ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ರೈತರು ಅಲ್ಲಿಗೂ ನುಗ್ಗಿದ್ದು, ಶಾಸಕಗೆ ಹಿಗ್ಗಾಮುಗ್ಗಾ ಥಳಿಸಿ ಶರ್ಟ್ ಹರಿದು ಹಾಕಿ ಮಸಿ ಬಳಿದಿದ್ದಾರೆ.
ಘಟನೆ ಸಂಬಂಧ 250ರಿಂದ 300 ಜನರ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ರೈತರ ಗುಂಪಿನಲ್ಲಿದ್ದ ಹಲ್ಲೆಕೋರರ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಇನ್ನೂ ಈ ಘಟನೆಯನ್ನು ಪಂಜಾಬ್ ಅಕಾಲಿದಳ ಮತ್ತು ಕಾಂಗ್ರೆಸ್ ಖಂಡಿಸಿದೆ. ಇಂತಹ ಘಟನೆಗಳಿಂದ ರೈತರ ಪ್ರತಿಭಟನೆಯ ಶಕ್ತಿ ಕುಗ್ಗುತ್ತದೆ ಎಂದು ರೈತರನ್ನು ಎಚ್ಚರಿಸಿದ್ದಾರೆ.
ಮುತ್ತು ತಂದ ಆಪತ್ತು | ಎಲ್ಲರೆದುರು ಮೇಯರ್ ಮುತ್ತಿಟ್ಟ ಘಟನೆ ವಿರುದ್ಧ ಭಾರೀ ಆಕ್ರೋಶ