ಬೆಲೆ ಏರಿಕೆ ಬಗ್ಗೆ ಸ್ಮೃತಿ ಇರಾನಿಗೆ ಪ್ರಶ್ನೆ ಕೇಳಿದ್ದಕ್ಕೆ ಚಪ್ಪಾಳೆ ತಟ್ಟಿ ನಕ್ಕ ಬಿಜೆಪಿ ಬೆಂಬಲಿಗರು: ಪ್ರಿಯಾಂಕ್ ಖರ್ಗೆ ಕಿಡಿ - Mahanayaka
2:03 AM Thursday 12 - December 2024

ಬೆಲೆ ಏರಿಕೆ ಬಗ್ಗೆ ಸ್ಮೃತಿ ಇರಾನಿಗೆ ಪ್ರಶ್ನೆ ಕೇಳಿದ್ದಕ್ಕೆ ಚಪ್ಪಾಳೆ ತಟ್ಟಿ ನಕ್ಕ ಬಿಜೆಪಿ ಬೆಂಬಲಿಗರು: ಪ್ರಿಯಾಂಕ್ ಖರ್ಗೆ ಕಿಡಿ

bjp
27/11/2022

ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ  ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸ್ಮೃತಿ ಇರಾನಿ ಅವರ ಸಂವಾದ ಕಾರ್ಯಕ್ರಮವೊಂದರ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆಯ ಬಗ್ಗೆ ಮಹಿಳೆಯೊಬ್ಬರು ಸ್ಮೃತಿ ಇರಾನಿ ಅವರಲ್ಲಿ ಪ್ರಶ್ನೆ ಕೇಳುತ್ತಾರೆ,  ಈ ವೇಳೆ ಸಭೆಯಲ್ಲಿರುವ ಬಿಜೆಪಿ ಬೆಂಬಲಿಗರು ಚಪ್ಪಾಳೆ ತಟ್ಟಿ ನಕ್ಕು ಮಹಿಳೆಯ ಪ್ರಶ್ನೆಯನ್ನು ಹಾಸ್ಯಾಸ್ಪದ ಎಂಬಂತೆ ಬಿಂಬಿಸುತ್ತಾರೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ,  ಅಧಿಕಾರದ ನಶೆಯಲ್ಲಿ ಬಿಜೆಪಿ ನಾಯಕರು, ಧರ್ಮದ ಅಮಲಿನಲ್ಲಿರುವ ಸರ್ಕಾರಕ್ಕೆ ಸಾಮಾನ್ಯ ಜನರ ಪ್ರಶ್ನೆಗಳು ಬಿಡಿ, ಬಿಜೆಪಿ ಕಾರ್ಯಕರ್ತರ ಪ್ರಶ್ನೆಗಳೇ ಕೇಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರು ಗ್ಯಾಸ್ ಸಿಲಿಂಡರ್ ಬೆಲೆಗಳ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಪ್ರಶ್ನಿಸುತ್ತಾರೆ ಆದರೆ ಸಭೆಯಿಂದ ಬಂದ ಉತ್ತರ ನಗು ಮತ್ತು ಚಪ್ಪಾಳೆ!

ಮಾನ್ಯ ಸ್ಮೃತಿ ಇರಾನಿ ಅವರೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಹೆಚ್ಚಾದರೆ ಬೀದಿಗಿಳಿದು ಹೋರಾಟ ಮಾಡುತ್ತಿದ್ದದ್ದು ನೆನಪಿದಿಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ