ಸೌದಿಯಲ್ಲಿ ಒಂಟೆ ಪಯಣ ಮಾಡಿ ಸುದ್ದಿಯಾದ ಬ್ರಿಟನ್ ಮಂದಿ: ಅನುಭವ ಹಂಚಿಕೊಂಡ ಪ್ರವಾಸಿಗರು

ಒಂಟೆಯನ್ನು ಮರುಭೂಮಿಯ ಹಡಗು ಎಂದು ಹೇಳಲಾಗುತ್ತದೆ. ಅರಬ್ ರಾಷ್ಟ್ರಗಳಿಗೆ ಪ್ರವಾಸ ಹೋದವರಿಗೆ ಈ ಒಂಟೆ ಒಂದು ಕುತೂಹಲದ ಪ್ರಾಣಿ. ಅದರಲ್ಲೂ ಯುರೋಪಿಯನ್ ರಾಷ್ಟ್ರದ ಮಂದಿ ಪ್ರವಾಸಿಗರಾಗಿ ಈ ಮರುಭೂಮಿಗೆ ಬಂದರೆ ಒಂಟೆಯ ಮೇಲಿನ ಸವಾರಿಯನ್ನ ಇಷ್ಟ ಪಡುತ್ತಾರೆ. ಇದೀಗ ಬ್ರಿಟನ್ನಿನಿಂದ ಬಂದ ಐದು ಮಂದಿ ಕುತೂಹಲಿಗರು ಸೌದಿ ಅರೇಬಿಯಾದಲ್ಲಿ ಒಂಟೆಯ ಮೇಲೇರಿ ಸುದ್ದಿ ಮಾಡಿದ್ದಾರೆ.
9 ದಿನಗಳ ಕಾಲ ನಿರಂತರ ಒಂಟೆಯ ಮೇಲೆ ಪ್ರಯಾಣಿಸಿ 500 ಕಿಲೋಮೀಟರ್ ರನಷ್ಟು ಯಾತ್ರೆಯನ್ನು ಮುಗಿಸಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಮೈಕಲ್ ಬೇಕರ್, ಮಾರ್ಟಿನ್ ಥಾಮ್ಸನ್, ಜೇಮ್ಸ್ ಕಾರ್ಡರ್, ರೀಡಾ ಮತ್ತು ಗ್ರೇಗ್ ರೋಸ್ ಎಂಬವರೇ ಬ್ರಿಟನ್ನಿನ ಈ ಐದು ಮಂದಿ ಸಾಹಸಿಗರು. ಸೌದಿ ಅರೇಬಿಯಾದ ಕಿಂಗ್ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ರಾಯಲ್ ಪ್ರದೇಶದಲ್ಲಿ ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಸಂರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡಿರುವ ಈ ಮರುಭೂಮಿಯಲ್ಲಿ ಒಂಟೆಯ ಮೇಲೆ ಸುತ್ತು ಹಾಕುವ ನಿರ್ಧಾರವನ್ನು ಮಾಡಿದ ಈ ಸಾಹಸಿಗರು ಬರೋಬರಿ 9 ದಿವಸಗಳ ಕಾಲ ಪ್ರಯಾಣ ನಡೆಸಿದ್ದಾರೆ. ಪ್ರತಿದಿನ 50 ಕಿಲೋಮೀಟರ್ ನಷ್ಟು ಸಾಗಿ ರಾತ್ರಿ ವೇಳೆ ವಿಶ್ರಾಂತಿ ಪಡೆದು ಮರುದಿನ ಯಾತ್ರೆಯನ್ನು ಆರಂಭಿಸುವ ಮೂಲಕ ಒಂಬತ್ತು ದಿನಗಳಲ್ಲಿ 500 ಕಿಲೋಮೀಟರ್ ಯಾತ್ರೆ ನಡೆಸಿದ್ದಾರೆ.
ಸೌದಿ ಅರೇಬಿಯಾದ ತಬೂಕ್ ಭಾಗವಾದ ಅಲ್ ಖಲೀಬಾ ನಗರದಿಂದ ಯಾತ್ರೆಯನ್ನ ಆರಂಭಿಸಿ ಅಲ್ ಹದೀಸದಲ್ಲಿ ಯಾತ್ರೆಯನ್ನ ಮುಕ್ತಾಯಗೊಳಿಸಿದ್ದಾರೆ. ಆ ಬಳಿಕ ಅವರು ಹಂಚಿಕೊಂಡ ಅನುಭವಗಳಂತೂ ಅದ್ಭುತವಾಗಿವೆ.
ನಾವು ನಮ್ಮ ಪ್ರಯಾಣದ ಉದ್ದಕ್ಕೂ ಮನೋಹರವಾದ ಪರ್ವತಗಳು, ಹಳೆ ಕಾಲದ ಅಗ್ನಿ ಪರ್ವತಗಳನ್ನ ನೋಡಿದ್ದೇವೆ. ಬಂಗಾರ ಬಣ್ಣದ ಕತ್ತೆಗಳನ್ನು ನೋಡಿದ್ದೇವೆ. ಹತ್ತು ಹಲವು ರೀತಿಯ ಪಕ್ಷಿಗಳನ್ನು ನೋಡಿದ್ದೇವೆ ಮರುಭೂಮಿಯ ನರಿ ಇತ್ಯಾದಿಗಳನ್ನು ನೋಡಿ ಆನಂದಿಸಿದ್ದೇವೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj