ಬುದ್ಧನ ಉಪದೇಶಗಳು ಸರ್ವಕಾಲಿಕ ಸತ್ಯ:  ಡಾ.ಎಚ್.ತುಕಾರಾಂ - Mahanayaka

ಬುದ್ಧನ ಉಪದೇಶಗಳು ಸರ್ವಕಾಲಿಕ ಸತ್ಯ:  ಡಾ.ಎಚ್.ತುಕಾರಾಂ

budha
13/05/2025

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು   ವಾಸುದೇವ ಚಾರಿಟಬಲ್ ಟ್ರಸ್ಟ್ (ರಿ) ಸಹಯೋಗದಲ್ಲಿ ಬೆಂಗಳೂರು, ಮಲ್ಲತಳ್ಳಿಯಲ್ಲಿರುವ ಗಾನ ಪಲ್ಲವಿ  ಸಭಾಂಗಣದಲ್ಲಿ “ಬುದ್ಧ ಪೂರ್ಣಿಮಾ” ಕಾರ್ಯಕ್ರಮವನ್ನು ಆಚರಿಸಲಾಯಿತು.

ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ವಾಸುದೇವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಎಚ್.ತುಕಾರಾಂ ಮಾತನಾಡುತ್ತಾ, ಬುದ್ಧನ ಉಪದೇಶಗಳು ಸರ್ವಕಾಲಿಕ ಸತ್ಯವಾಗಿವೆ. ಬುದ್ಧ ನಡೆದು ಬಂದ ದಾರಿ ಹಾಗೂ ಬುದ್ಧನ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಸಮಾಜ ವಿಜ್ಞಾನಿಯಾಗಿ ಅಂದು ಬುದ್ಧ ಬೋಧಿಸಿದ ಬೋಧನೆಗಳು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತವೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಸದಸ್ಯರಾದ ಎಂ.ಗಿರಿಯಪ್ಪನವರು ಮಾತನಾಡಿ, ಬುದ್ಧನ ನೆಲದಲ್ಲಿ ಇಂದು ಯುದ್ಧದ ಭೀತಿಯಲ್ಲಿ  ಬದುಕುವಂತಾಗಿರುವುದು ವಿಪರ್ಯಾಸ. ಬುದ್ಧನ ಪಂಚಶೀಲ ತತ್ವಗಳು, ಅಷ್ಟಾಂಗ ಮಾರ್ಗಗಳು ಒಳ್ಳೆಯ ಉಪದೇಶಗಳನ್ನು ಮಾಡುತ್ತವೆ. ಅಶೋಕ, ಬಸವೇಶ್ವರ, ಗಾಂಧಿ, ಅಂಬೇಡ್ಕರ ಬುದ್ಧನ ತತ್ವಗಳನ್ನು ತಮ್ಮ ಬದುಕಿನಲ್ಲಿ ಪ್ರಯೋಗಗಳಾಗಿ ತೆಗೆದುಕೊಂಡರು. ಇದರಿಂದ ಅವರು ಉನ್ನತ ವ್ಯಕ್ತಿಗಳಾಗಿ ರೂಪುಗೊಂಡರು. ಸತ್ಯ, ಅಹಿಂಸೆ ಬುದ್ಧನಿಂದ ಬಂದ ಸಂದೇಶಗಳು. ಇಂದು ಮನುಷ್ಯರು ಇದನ್ನು ಅರಿತುಕೊಳ್ಳದೆ ತಮ್ಮ ಜೀವನಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾದ ಉದಂತ ಶಿವಕುಮಾರ್  ಮಾತನಾಡುತ್ತಾ,  ಬುದ್ಧನ ಬೋಧನೆಗಳು ಶ್ರೇಷ್ಠವಾದವು. ಅವು ಮನುಷ್ಯನಲ್ಲಿ ಸಂಸ್ಕಾರವನ್ನು ಮೂಡಿಸುತ್ತವೆ. ಶ್ರೇಷ್ಠ ಸಮಾಜವನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ, ಆದರೆ ಇಂದು ಸ್ವಪ್ರತಿಷ್ಠೆಯು ಮನುಷ್ಯನ ಜೀವನವನ್ನು ಹಾಳುಮಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಬಸವಯ್ಯ, ಎಚ್. ವೆಂಕಟರಾಜು, ಕುಮಾರ್, ಮಂಜುನಾಥ್, ಕೆಂಪಯ್ಯ, ಮಲ್ಲೇಶ್, ಬಸವರಾಜು, ನಾಗರಾಜು, ಎಂ. ಎಚ್. ರಾಮಮೂರ್ತಿ, ಭಾಸ್ಕರ್ ಮುಂತಾದವರು ಉಪಸ್ಥಿತರಿದ್ದರು.


 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ