ಕೊರೊನಾ ತಂದ ಸೌಭಾಗ್ಯ! | ಸಿಡಿ ಪ್ರಕರಣ ತಾತ್ಕಾಲಿಕ ಸ್ಥಗಿತ - Mahanayaka

ಕೊರೊನಾ ತಂದ ಸೌಭಾಗ್ಯ! | ಸಿಡಿ ಪ್ರಕರಣ ತಾತ್ಕಾಲಿಕ ಸ್ಥಗಿತ

ramesh jarakiholi
24/04/2021

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ​ (​ಎ​ಸ್‌​ ಐ​ಟಿ) ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ವಾರದ ಹಿಂದೆಯೇ ಎಸ್‌ಐಟಿ ಮುಂದೆ ಜಾರಕಿಹೊಳಿಯವರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಅವರು ವಿಚಾರಣೆಗೆ ಹಾಜರಾಗಿಲ್ಲ. ಇನ್ನು ಎಲ್ಲಾ ಅಧಿಕಾರಿಗಳೂ ಕೂಡ ಕೊರೋನಾ ಕರ್ತವ್ಯದಲ್ಲಿ ಕಾರ್ಯಮಗ್ನರಾಗಿದ್ದಾರೆ.

ಪ್ರಕರಣ ಸಂಬಂಧ ತನಿಖೆಗೆ ಹೆಚ್ಚಿನ ಕಾಲಾವಕಾಶ ಬೇಕಿದ್ದು, ಹೆಚ್ಚೆಚ್ಚು ಸಾಕ್ಷ್ಯಾಧಾರ, ದಾಖಲೆಗಳನ್ನು ಸಂಗ್ರಹಿಸಬೇಕಿದೆ. ಇನ್ನು ಸಾಕಷ್ಟು ಅಧಿಕಾರಿಗಳೂ ಕೂಡ ಈ ಪ್ರಕರಣ ಸಂಬಂಧ ಆಸಕ್ತಿಯನ್ನು ತೋರುತ್ತಿಲ್ಲ. ಹೀಗಾಗಿ ತನಿಖೆ ಕ್ಲಿಷ್ಟಕರವಾಗಿದೆ. ಸರ್ಕಾರದ ಮೇಲೂ ಸಾಕಷ್ಟು ಒತ್ತಡಗಳಿವೆ ಎಂದು ಎಸ್‌ಐಟಿ ಹಿರಿಯ ಅಧಿಕಾರಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ