ಅಂಬಾನಿ-ಅದಾನಿ ವಸ್ತುಗಳ ಬಾಯ್ ಕಾಟ್ ಗೆ ಕರೆ
ಬೆಂಗಳೂರು: ನೂತನ ಕೃಷಿ ಕಾನೂನು ವಿರೋಧಿಸಿ ಐಕ್ಯ ಸಮಿತಿ ವಿನೂತನ ಪ್ರತಿಭಟನೆ ಆರಂಭಿಸಿದ್ದು, ರೈತರ ಪರವಾಗಿ ನಿಂತು, ಜಿಯೋ ಸಿಮ್ ಮೊಬೈಲ್ ಪೋರ್ಟ್ ಮಾಡಿ ವಿದ್ಯಾರ್ಥಿಗಳು ಹೊಸ ಕ್ರಾಂತಿಗೆ ಮುಂದಾಗಿದ್ದಾರೆ
ಅಂಬಾನಿ, ಅದಾನಿ ಕಂಪೆನಿಯ ವಸ್ತುಗಳನ್ನು ಬಾಯ್ ಕಾಟ್ ಮಾಡಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದು, ರಿಲಯನ್ಸ್ ಜಿಯೋ ಕಂಪೆನಿಯ ಮೊಬೈಲ್ ನಂಬರ್ ಗಳನ್ನು ಪೋರ್ಟ್ ಮಾಡಲು ಕರೆ ನೀಡಲಾಗಿದೆ.
ಅಂಬಾನಿ ಅದಾನಿ ಮಾಲಕತ್ವದ ವಸ್ತುಗಳನ್ನು ನಾವು ಬಳಸುವುದಿಲ್ಲ ಎಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು. ಸರ್ಕಾರಿ ಸ್ವಾಮ್ಯದ ಒಂದೊಂದೇ ಸಂಸ್ಥೆಗಳನ್ನು ಅಂಬಾನಿ ಅದಾನಿಗೆ ಪರೋಕ್ಷವಾಗಿ ಮಾರಲಾಗುತ್ತಿದೆ ಎಂಬ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ರೈತ ಚಳುವಳಿಗಾರರು ಕೂಡ ಅಂಬಾನಿ ಅದಾನಿ ಮಾಲಕತ್ವಕ್ಕೆ ಇಡೀ ದೇಶವನ್ನು ನೂಕುತ್ತಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.