ವಿಶ್ವ ಮಾನವ ಹಕ್ಕುಗಳ ದಿನದಂದು ಒತ್ತೆಯಾಳಾಗಿದ ಬಡ ಕಾರ್ಮಿಕರಿಗೆ ಬಿಡುಗಡೆ ಭಾಗ್ಯ - Mahanayaka
10:59 PM Sunday 25 - September 2022

ವಿಶ್ವ ಮಾನವ ಹಕ್ಕುಗಳ ದಿನದಂದು ಒತ್ತೆಯಾಳಾಗಿದ ಬಡ ಕಾರ್ಮಿಕರಿಗೆ ಬಿಡುಗಡೆ ಭಾಗ್ಯ

10/12/2020

  • ಬಾಲಾಜಿ ಎಂ.  ಕಾಂಬಳೆ

ವಿಜಯಪುರ:  ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಸಾಲೋಡಗಿ ಗ್ರಾಮದಲ್ಲಿ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದ ಸುಮಾರು 16 ಕೂಲಿ ಕಾರ್ಮಿಕರನ್ನು ಬಂಧನದಲ್ಲಿ ಇರಿಸಿ, ಅವರನ್ನು ಮಾನಸಿಕವಾಗಿ ಹಿಂಸೆ ನೀಡಿ ಒತ್ತೆಯಾಳುಗಳಾಗಿ ಜೀತ ಮಾಡಿಸಿಕೊಳ್ಳಲಾಗುತ್ತಿತ್ತು.

ಈ ಕೂಲಿ ಕಾರ್ಮಿಕರಲ್ಲಿ ಒಬ್ಬ ಕಾರ್ಮಿಕ ತಪ್ಪಿಕೊಂಡು ತಮ್ಮ ರಾಜ್ಯದವರಿಗೆ ಸಂಪರ್ಕ ಸಾಧಿಸಿಕೊಂಡು ಸ್ಥಳೀಯ ಹೋರಾಟಗಾರರು ಹಾಗೂ ವಕೀಲರರಾದ Shreenath Pujari ರವರ ಮೂಲಕ ಸ್ಥಳೀಯ ಜಿಲ್ಲಾಡಳಿತದ ಸಹಕಾರದೊಂದಿಗೆ ಇಂದು ವಿಶ್ವ ಮಾನವ ಹಕ್ಕುಗಳ ದಿನದಂದು ಸುಮಾರು 16 ಬಡ ಕೂಲಿ ಕಾರ್ಮಿಕರನ್ನು ಬಂಧನದಿಂದ ಬಿಡುಗಡೆಗೊಳಿಸಲಾಗಿದೆ.

ಕಾರ್ಮಿಕರನ್ನು ಒತ್ತೆಯಾಳುಗಳಾಗಿಟ್ಟ ಮಾಲೀಕರ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳೀಯ ಅಸ್ಟೆಂಟ್ ಕಮಿಷನರ್ ರವರು ಕಾರ್ಮಿಕರಿಗೆ ಸ್ಪಂದಿಸಿ ಅವರನ್ನು ತಮ್ಮ ರಾಜ್ಯಕ್ಕೆ ಕಳುಹಿಸವು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಶ್ವ ಮಾನವ ಹಕ್ಕುಗಳ ದಿನದಂದು ಇಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ ದುರಂತ ಎನ್ನಬಹುದು. ಅಂದ ಹಾಗೆ ಉತ್ತರ ಪ್ರದೇಶದ ಈ ವಾರಣಾಸಿ ಕ್ಷೇತ್ರವು ನಮ್ಮ ಪ್ರಧಾನಿ ನರೇಂದ್ರ ಮೋದಿ ರವರ ಲೋಕಸಭಾ ಕ್ಷೇತ್ರವಾಗಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ