ಟೋಲ್ ಫ್ಲಾಜಾದ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ನಾಯಕಿ - Mahanayaka

ಟೋಲ್ ಫ್ಲಾಜಾದ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ನಾಯಕಿ

10/12/2020

ಆಂಧ್ರಪ್ರದೇಶ: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕಿಯೊಬ್ಬರು ಟೋಲ್ ಗೇಟ್ ಸಿಬ್ಬಂದಿಯ ವರ್ತನೆಯಿಂದ ಆಕ್ರೋಶಗೊಂಡು ಸಿಬ್ಬಂದಿಯೋರ್ವರಿಗೆ ಕೆನ್ನೆಗೆ ಬಾರಿಸಿದ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ವೈಎಸ್​ ಆರ್​​ ಸಿಪಿ ನಾಯಕಿ ಡಿ.ರೇವತಿ ಗುಂಟೂರಿನ ಕಾಜಾ ಟೋಲ್ ನಲ್ಲಿ ಟೋಲ್ ನೀಡುವ ವಿಚಾರವಾಗಿ ಸಿಬ್ಬಂದಿಯ ಜೊತೆಗೆ ವಾಗ್ವಾದ ಉಂಟಾಗಿದೆ. ಈ ಸಂದರ್ಭದಲ್ಲಿ ಕಾರಿನಿಂದ ಇಳಿದ ರೇವತಿ ಬ್ಯಾರಿಕೇಡ್ ಗಳನ್ನು ತಳ್ಳಿದ್ದಾರೆ. ಈ ವೇಳೆ ಮಹಿಳಾ ನಾಯಕಿಯನ್ನು ಸಿಬ್ಬಂದಿ ಎಳೆದಾಡಿದ್ದಾರೆ.

ಸಿಬ್ಬಂದಿ ಹಿಡಿದು ಎಳೆದಾಡಿದ ಸಂದರ್ಭದಲ್ಲಿ ಆಕ್ರೋಗೊಂಡ ರೇವತಿ ಅವರು,  ಟೋಲ್ ಫ್ಲಾಜಾದ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ