ಆಟಿಕೆ ಗನ್ ಬೇಕು ಎಂದ ಪುಟ್ಟ ಹುಡುಗನಿಗೆ ನೋ… ಎಂದ ಸಾಂತಾ ಕ್ಲಾಸ್ | ಹುಡುಗ ಕಣ್ಣೀರು ಹಾಕಿದ ವಿಡಿಯೋ ವೈರಲ್ - Mahanayaka

ಆಟಿಕೆ ಗನ್ ಬೇಕು ಎಂದ ಪುಟ್ಟ ಹುಡುಗನಿಗೆ ನೋ… ಎಂದ ಸಾಂತಾ ಕ್ಲಾಸ್ | ಹುಡುಗ ಕಣ್ಣೀರು ಹಾಕಿದ ವಿಡಿಯೋ ವೈರಲ್

10/12/2020

ಕ್ರಿಸ್ ಮಸ್ ಬಂದರೆ ಸಾಕು ಸಾಂತಾ ಕ್ಲಾಸ್ ನ ಬರುವಿಕೆಗೆ ಮಕ್ಕಳು ಕಾಯುತ್ತಿರುತ್ತಾರೆ. ಈ ಬಾರಿಯ ಕ್ರಿಸ್ ಮಸ್ ಸಂದರ್ಭದಲ್ಲಿ 4 ವರ್ಷದ ಪುಟ್ಟ ಹುಡುಗ  ಮೈಕೆಲ್ ಡಿಕಾರ್ಲೊ ಸುದ್ದಿಯಾಗಿದ್ದಾನೆ. ಸಾಂತಾ ಕ್ಲಾಸ್ ಉಡುಗೊರೆ ನೀಡಲು ಬಂದಾಗ ಆತ ನನಗೆ ಆಟಿಕೆ ಗನ್ ಬೇಕು ಎಂದು ಕೇಳುತ್ತಾನೆ.  ಆದರೆ ಸಾಂತಾ ಕ್ಲಾಸ್ ತನ್ನ ಬಳಿಯಲ್ಲಿ ಗನ್ ಇಲ್ಲ ಎಂದು ಹೇಳಿದಾಗ ಮೈಕೆಲ್ ಡಿಕಾರ್ಲೊ ನನಗೆ ಗನ್ ಬೇಕು ಎಂದು ಹಠ ಹಿಡಿಯುತ್ತಾನೆ.  ಸಾಂತಾ ಹೇಳುವುದನ್ನು ಆತನ ತಾಯಿ ಸಬೆಲ್ಲಾ ಡಿಕಾರ್ಲೊ ವಿವರಿಸಿದರೂ ಬಾಲಕ ಅರ್ಥ ಮಾಡಿಕೊಳ್ಳುವುದಿಲ್ಲ. ತಾಯಿಯ ಮಾತನ್ನು ಅರ್ಥ ಮಾಡಿಕೊಳ್ಳದ ಆತ ಕಣ್ಣೀರು ಹಾಕಲು ಪ್ರಾರಂಭಿಸುತ್ತಾನೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಸಾಂತಾ ಕ್ಲಾಸ್  ಗನ್  ಕೇಳಿದಾಗ ನೋ ಎಂದೇ ಉತ್ತರಿಸಿದ್ದಾರೆ. ಇದರಿಂದಾಗಿ ನನ್ನ ಪುಟ್ಟ ಕಂದ ಕಣ್ಣೀರು ಹಾಕಿದ. ಅದನ್ನು ನಾನು ನೋಡಬೇಕಾಗಿ ಬಂತು ಎಂದು ಬಾಲಕನ ತಾಯಿ ಸೆಬೆಲ್ಲಾ ಡಿಕಾರ್ಲೋ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಾಂತಾ ಕ್ಲಾಸ್ ಜೊತೆಗೆ ಮಗು ಆಟಿಕೆ ಗನ್ ಗಾಗಿ ಹಠ ಹಿಡಿಯುತ್ತಿರುವ ವಿಡಿಯೋಗೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರತಿಕ್ರಿಯಿಸಿದ್ದು, ಸಾಂತಾ ಕ್ಲಾಸ್  ಹಾಗೂ ಪುಟ್ಟ ಬಾಲಕನ ವಿಚಾರದಲ್ಲಿ ಭಾರೀ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಮಕ್ಕಳು ಇಷ್ಟಪಡುವಂತಹ ಆಟಿಕೆಗಳನ್ನು ಕ್ರಿಸ್ ಮಸ್ ಸಂದರ್ಭದಲ್ಲಿ ನೀಡಲು  ಮೈಕಲ್ ಡಿಕಾರ್ಲೋ ತಾಯಿ ಸೆಬೆಲ್ಲಾ ಡಿಕಾರ್ಲೋ ನೆರ್ಫ್ ಮತ್ತು ಆಟಿಕೆ ದಾನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನಾವು ಈ ಘಟನೆಯನ್ನು ಸಕಾರಾತ್ಮಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ