ಭಾಷಣ ಮಾಡುವುದು ಮಾತ್ರವಲ್ಲ, ಅದರಾಚೆಗಿನ ಚೈತ್ರಾ ಬೇರೆನೇ ಇದ್ದಾರೆ: ಚೈತ್ರಾ ಕುಂದಾಪುರ ಹೇಳಿದ್ದೇನು?
ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಹಿಂದೂ ಪರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಎಂಟ್ರಿ ನೀಡಿದ್ದಾರೆ. ಭಾರೀ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಜೈಲು ಪಾಲಾಗಿದ್ದರು. ಇದೀಗ ಬಿಗ್ ಬಾಸ್ ಮೂಲಕ ಕಂಬ್ಯಾಕ್ ಆಗಿದ್ದಾರೆ.
ಗ್ರ್ಯಾಂಡ್ ಓಪನಿಂಗ್ ದಿನ ಕಿಚ್ಚ ಸುದೀಪ್ ಎದುರು ಮಾತನಾಡಿದ ಅವರು, ಗಂಟೆ ಒಂದು ಗಂಟೆ ವೇದಿಕೆ ಮೇಲೆ ನಿಂತು ಭಾಷಣ ಮಾಡುವುದು ಮಾತ್ರ ಚೈತ್ರಾ ಅಲ್ಲ. ಅದರಾಚೆಗಿನ ಚೈತ್ರಾ ಬೇರೆನೆ ಇದ್ದಾರೆ. ಬಹುಶಃ ಅದನ್ನು ತೋರಿಸುವಂತಹ ಸಮಯ ಈಗ ಬಂದಿದೆ ಎಂದಿದ್ದಾರೆ.
ಬಹಳ ಬೇಗ ರಿಯ್ಯಾಕ್ಟ್ ಆಗುತ್ತಾರೆ ಎನ್ನುವಂತಹ ಸಂದರ್ಭದಲ್ಲಿ ನಾನು ರಿಯ್ಯಾಕ್ಟ್ ಆಗದೇ ಇರಬಹುದು. ಅಥವಾ ನೋಡುವವರು ಶಾಕ್ ಆಗುವ ಹಾಗೇ ಕೂಡ ಬದುಕಬಹುದು ಅದನ್ನು ಖಂಡಿತಾ ನನ್ನ ಕಡೆಯಿಂದ ಬಿಗ್ ಬಾಸ್ ಮನೆಯಲ್ಲಿ ನಿರೀಕ್ಷೆ ಮಾಡಬಹುದು ಎಂದು ಹೇಳಿದರು.
ನನ್ನ ಜೀವನದಲ್ಲಿ ವಿವಾದದಗಳು ಎನ್ನುವುದಕ್ಕಿಂತ ನಾನು ಕಲಿಯುತ್ತಿದ್ದೇನೆ. ಪ್ರತಿ ಕಲಿಯುವಿಕೆಯಲ್ಲಿಯೂ ಕೂಡ ತಪ್ಪಿರಬಹುದು. ಅಥವಾ ನಾನು ಬೆಳೆದಿರುವ ವಾತಾವರಣವನ್ನು ಅಥವಾ ನಾನು ನಂಬಿರುವ ಚಿಂತನೆಗಳನ್ನು ಎಲ್ಲರೂ ಒಪ್ಪದೇ ಇರಬಹುದು. ಅದು ವಿವಾದ ಆಗಿರಬಹುದು. ಆದರೆ ನನಗೆ ಸರಿ ಅನಿಸಿದ್ದು, ಸತ್ಯ ಅನಿಸಿದ್ದನ್ನು ನಾನು ಗಟ್ಟಿಯಾಗಿ ಹೇಳುತ್ತೇನೆ ಎಂದರು.
ಸತ್ಯ ಹೇಳೋದು ವಿವಾದ ಆಗುತ್ತದೆ ಎನ್ನುವುದಾದರೆ ನನಗೆ ಆ ಕಾಂಟ್ರವರ್ಸಿ ಮೇಲೆ ಪ್ರೀತಿ ಇದೆ. ನನಗೆ ಅದರ ಮೇಲೆ ಭಯ ಇಲ್ಲ ಎಂದು ಚೈತ್ರಾ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: