ಕಸ, ಅಕ್ರಮ ಚಟುವಟಿಕೆಗಳ ಅಡ್ಡೆಯಾಗುತ್ತಿರುವ ಚಂದುವಳ್ಳಿ ಬಸ್ ನಿಲ್ದಾಣ! - Mahanayaka
2:28 AM Wednesday 22 - January 2025

ಕಸ, ಅಕ್ರಮ ಚಟುವಟಿಕೆಗಳ ಅಡ್ಡೆಯಾಗುತ್ತಿರುವ ಚಂದುವಳ್ಳಿ ಬಸ್ ನಿಲ್ದಾಣ!

chanduvalli
17/12/2024

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಚಂದುವಳ್ಳಿ ತಂಗುದಾಣ ಕಸದ ಅಡ್ಡೆಯಾಗುತ್ತಿದೆ. ರಸ್ತೆಯ ಬದಿಯಲ್ಲಿ ಚಂದುವಳ್ಳಿಯ ಗ್ರಾಮಸ್ಥರಿಗೆ ಬಸ್ ತಂಗುದಾಣ ಕಟ್ಟಲಾಗಿದೆ. ಆದರೆ ಇಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನದ ಅಡ್ಡೆ ಮಾಡುತ್ತಿದ್ದಾರೆ. ಬೀಡಿ, ಸಿಗರೇಟು ಸೇದಿ ಅಲ್ಲಿಯೇ ಕಸವನ್ನು ಬಿಸಾಕಿ ಹೋಗುತ್ತಿದ್ದಾರೆ.

ಅಲ್ಲದೇ ಇತರ ಕಸವೂ ಅಲ್ಲಿಯೇ ಬಿಸಾಕಿ ಗಬ್ಬು ನಾರುತ್ತಿದೆ. ಬಸ್ ನಿಲ್ದಾಣ ಶುಚಿಯಾಗಿಟ್ಟು ಆಕ್ರಮ ಚಟುವಟಿಕೆಗಳಿಗೆ ತಾಣವಾಗಬಾರದು. ಬಸ್ ನಿಲ್ದಾಣ ಕಳೆದ ಬಾರಿಯ ಮಳೆಯ ಹೊಡೆತಕ್ಕೆ ಗೋಡೆ ಶಿಥಿಲವಾಗಿ ಬಿರುಕು ಬಿಟ್ಟಿದೆ. ಬಸ್ ನಿಲ್ದಾಣ ಸಾರ್ವಜನಿಕರ ಆಸ್ತಿಯಾಗಿದ್ದು, ಪ್ರಯಾಣಿಕರಿಗೆ ಆಶ್ರಯ ತಾಣವಾಗಿದೆ. ಇಂತಹ ಪರಿಸರದ ನಿಲ್ದಾಣದ ಸ್ವಚ್ಚತೆ ಕಾಪಾಡಬೇಕಿದೆ ಎನ್ನುವ ಒತ್ತಾಯ ಪ್ರಜ್ಞಾವಂತರ ನಾಗರಿಕರಿಂದ ಕೇಳಿ ಬಂದಿದೆ.

ಬಸ್ ನಿಲ್ದಾಣದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬೀಳಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಬಸ್ ತಂಗುದಾಣ ಸ್ವಚ್ಚತೆಯ ಬಗ್ಗೆ ಸೂಕ್ತ ಗಮನ ಹರಿಸಬೇಕೆಂದು ಕಾಮಿಡಿ ಕಿಲಾಡಿ ಖ್ಯಾತಿಯ ರಮೇಶ್ ಯಾದವ್ ಆಗ್ರಹಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ