ಚಾರ್ಮಾಡಿ ಘಾಟ್ ವಾಹನ ಸವಾರೆರೇ ಎಚ್ಚರ: ರಸ್ತೆ ಅಡ್ಡ ನಿಲ್ಲುತ್ತಿದೆ ಒಂಟಿ ಸಲಗ! - Mahanayaka
3:13 AM Thursday 10 - September 2026

ಚಾರ್ಮಾಡಿ ಘಾಟ್ ವಾಹನ ಸವಾರೆರೇ ಎಚ್ಚರ: ರಸ್ತೆ ಅಡ್ಡ ನಿಲ್ಲುತ್ತಿದೆ ಒಂಟಿ ಸಲಗ!

charmadi ghat
18/04/2025

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸುವ ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ. ಚಾರ್ಮಾಡಿಘಾಟಿಯಲ್ಲಿ ಒಂಟಿ ಸಲಗವೊಂದು ರಸ್ತೆ ಅಡ್ಡ ನಿಲ್ಲುತ್ತಿದ್ದು, ಕಳೆದ 2 ದಿನಗಳಿಂದ ವಾಹನ ಸವಾರರಿಗೆ ದರ್ಶನ್ ನೀಡುತ್ತಿದೆ.

ಕಾರು ಜಸ್ಟ್ ಮಿಸ್:

ಕಾರೊಂದು ಕಾಡಾನೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಕಾರು ಚಾಲಕನ ದುಸ್ಸಾಹಸದ ವಿರುದ್ಧವೂ ಆಕ್ರೋಶ ಕೇಳಿ ಬಂದಿದೆ.

ಚಾರ್ಮಾಡಿ ಘಾಟಿಯಲ್ಲಿ ಆನೆಯನ್ನು ಕಂಡರೂ ಕಾರು ಚಾಲಕ ಪಕ್ಕದಲ್ಲೇ ಡ್ರೈವ್ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಹರಿದಾಡುತ್ತಿದೆ.

ಚಾರ್ಮಾಡಿ ಘಾಟಿಯಲ್ಲಿ ಆನೆಯನ್ನು ಕಂಡರೂ ಕಾರು ನಿಲ್ಲಿಸದ ಕಾರು ಚಾಲಕನ ಆನೆಯ ಪಕ್ಕದಲ್ಲೇ ಕಾರು ಚಲಾಯಿಸಿದ್ದಾನೆ. ಆನೆ ಒಂದು ಹೆಜ್ಜೆ ಇಟ್ಟು ಹಿಂದೆ ಸರಿಯಿತು. ಎಲ್ಲಾದರೂ ಸೊಂಡಿಲಿನಿಂದ  ಕಾರಿಗೆ ಬಡಿದಿದ್ರೆ, ಕಾರು ಮತ್ತು ಕಾರಿನೊಳಗಿದ್ದವರು ಸ್ಥಿತಿ ಏನಾಗುತ್ತಿತ್ತು ಎನ್ನುವ ಆತಂಕದ ಮಾತುಗಳು ಕೇಳಿ ಬಂದಿವೆ.

ಯಾವುದೇ ವಾಹನ ಸವಾರರು ಆನೆಯ ಎದುರು ತಮ್ಮ ವಾಹನ ಚಾಲನಾ ಪ್ರತಿಭೆ ತೋರಿಸಲು ಮುಂದಾಗಬೇಡಿ. ಎಚ್ಚರದಿಂದ ಚಾಲನೆ ಮಾಡಿ ಎನ್ನುವ ಮಾತುಗಳನ್ನ ಸ್ಥಳೀಯರು ಹೇಳುತ್ತಿದ್ದಾರೆ.

ನಾಲ್ಕೈದು ತಿಂಗಳ ಹಿಂದೆ ಚಾರ್ಮಾಡಿ ಘಾಟ್‌ ತಪ್ಪಲಿನ ಗ್ರಾಮಕ್ಕೂ ಒಂಟಿ ಸಲಗ ಬಂದಿತ್ತು ಇದೀಗ ರಸ್ತೆಯಲ್ಲಿ ಪತ್ತೆಯಾಗುತ್ತಿದೆ.

ಸರ್ಕಾರಿ ಬಸ್ಸಿಗೆ ಅಡ್ಡ ನಿಂತ ಒಂಟಿ ಸಲಗ:

ಚಾರ್ಮಾಡಿ ಘಾಟ್ ವಾಹನ ಸವಾರರು ಎಚ್ಚರ ವಹಿಸಬೇಕಿದೆ.  ಚಾರ್ಮಾಡಿ ಘಾಟಿಯಲ್ಲಿ ಹಗಲಿರುಳು ಬೀ ಕೇರ್ ಫುಲ್ ಆಗಿ ವಾಹನ ಚಲಾಯಿಸ ಬೇಕಿದೆ.  ಕಳೆದ ರಾತ್ರಿ ಸರ್ಕಾರಿ ಬಸ್ಸಿ ಒಂಟಿ ಸಲಗ ಅಡ್ಡ ನಿಂತಿತ್ತು. ನಿನ್ನೆ ಸಂಜೆ ಕೂಡ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಒಂಟಿ ಸಲಗ ನಿಂತಲ್ಲೇ ನಿಂತಿದ್ದು, ಇದರಿಂದಾಗಿ ಘಾಟಿಯಲ್ಲಿ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.

ಚಾರ್ಮಾಡಿ ಘಾಟ್ ಒಂದೆಡೆ ಗುಡ್ಡ, ಮತ್ತೊಂದೆಡೆ ಪ್ರಪಾತವಾಗಿದೆ. ಆನೆ ದಾಳಿಗೆ ಮುಂದಾದ್ರೆ ತಪ್ಪಿಸಿಕೊಳ್ಳೋದು ಬಹಳ ಕಷ್ಟದ ಕೆಲಸವಾಗಿದೆ. ನಿನ್ನೆ ಸಂಜೆ ಕಾರು ಚಾಲಕ ಆನೆಯಿಂದ ಜಸ್ಟ್ ಮಿಸ್ ಆಗಿದ್ದ, ಆನೆ ಏನಾದರೂ ಅನಾಹುತ ಸೃಷ್ಟಿಸುವ ಮುನ್ನ ಸೆರೆ ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು, ಪ್ರವಾಸಿಗರು ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti