ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ಮರ:  ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಆಂಬುಲೆನ್ಸ್ - Mahanayaka
10:47 AM Friday 14 - February 2025

ಚಾರ್ಮಾಡಿ ಘಾಟಿಯಲ್ಲಿ ಉರುಳಿ ಬಿದ್ದ ಮರ:  ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಆಂಬುಲೆನ್ಸ್

charmadi
12/09/2022

ಬೆಳ್ತಂಗಡಿ; ಚಾರ್ಮಾಡಿ ಘಾಟಿಯ 3ನೇ ತಿರುಗಿನ ಸಮೀಪ  ಬೃಹತ್ ಗಾತ್ರದ ಮರ ಒಂದು ರಸ್ತೆಗೆ ಉರುಳಿ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಮರ ಬೀಳುವ ಸಮಯಕ್ಕೆ ಯಾವುದೇ ವಾಹನ ಸಂಚರಿಸದ ಕಾರಣ ಯಾರಿಗೂ ಅಪಾಯ ಉಂಟಾಗಿಲ್ಲ.

ರಸ್ತೆಗೆ ಮರ ಬಿದ್ದ ಕಾರಣ ಅಂಬುಲೆನ್ಸ್ ಸಹಿತ ನೂರಾರು ವಾಹನಗಳು ಹಾಗೂ ಪ್ರಯಾಣಿಕರು ಒಂದು ತಾಸಿಗಿಂತ ಅಧಿಕಕಾಲ ಘಾಟಿ ಭಾಗದಲ್ಲಿ ಕಾಲಕಳೆಯಬೇಕಾಯಿತು.

ಚಾರ್ಮಾಡಿಯ ಸ್ಥಳೀಯರು ಆಗಮಿಸಿ ಮರತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಭಾನುವಾರ ಘಾಟಿ ಭಾಗದ ಅಣ್ಣಪ್ಪ ಗುಡಿಯ ಬಳಿ ಲಾರಿ ಹಾಗೂ ಬಸ್ ಡಿಕ್ಕಿ ಹೊಡೆದು ಒಂದೆರಡು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ