ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದಿಂದ ಕ್ರಿಸ್ಮಸ್ ಕ್ರೀಡಾಕೂಟ - Mahanayaka
4:13 AM Wednesday 11 - December 2024

ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದಿಂದ ಕ್ರಿಸ್ಮಸ್ ಕ್ರೀಡಾಕೂಟ

christmas games
17/12/2022

ಕೊಟ್ಟಿಗೆಹಾರ: ಕ್ರೀಡೆಯಿಂದ ದೇಹಕ್ಕೆ ವ್ಯಾಯಾಮ ಸಿಕ್ಕದಂತಾಗುತ್ತದೆ ಎಂದು ಬಣಕಲ್ ಬಾಲಿಕಾ ಮರಿಯ ಚರ್ಚ್ ಧರ್ಮಗುರುಗಳಾದ ಫಾ. ಪ್ರೇಮ್ ಲಾರೆನ್ಸ್ ಡಿಸೋಜ ಹೇಳಿದರು.

ಅವರು ಕ್ರೈಸ್ತರ ಅಭಿವೃದ್ಧಿ ಸಂಘದಿಂದ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಜರೆತ್ ಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.ಕ್ರೀಡೆಯು ಮನೋರಂಜನೆಯ ಅವಿಭಾಜ್ಯ ಅಂಗವಾಗಿದೆ’ಎಂದರು.

ಕ್ರೈಸ್ತರ ಅಭಿವೃದ್ಧಿ ಸಂಘದ ಅಧ್ಯಕ್ಷ ಮೆಲ್ವಿನ್ ಹರ್ಷ ಲಸ್ರಾದೊ ಮಾತನಾಡಿ’ ಕ್ರೀಡೆಗಳು ಮನಸ್ಸಿನ ಏಕಾಗ್ರತೆ ಬಲಪಡಿಸುವುದಲ್ಲದೇ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ’ ಎಂದರು.

ಸಹಾಯಕ ಧರ್ಮಗುರು ಫಾ.ತೋಮಸ್ ಕಲಘಟಗಿ, ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ ಮಾತನಾಡಿದರು.ಮಕ್ಕಳು ಹಾಗೂ ಹಿರಿಯರಿಗೆ ವಿವಿಧ ಕ್ರೀಡೆಗಳು ನಡೆದವು.

ಎಲ್ ಕೆಜಿ ಹಾಗೂ ಯುಕೆಜಿ ವಿಭಾಗದ ಚೆಂಡು ನಡೆಸುವ ಸ್ಪರ್ಧೆಯಲ್ಲಿ ಅಹನಾ ಪ್ರಥಮ,ಆನ್ವಿ ದ್ವಿತೀಯ,ರೋಯಿಸ್ಟನ್ ತೃತೀಯ ಸ್ಥಾನ ಪಡೆದರು.ಒಂದು ಮತ್ತು ಎರಡನೆ ತರಗತಿಯ ವಿದ್ಯಾರ್ಥಿಗಳಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಕ್ಯಾರೆನ್ ಪ್ರಥಮ,ಜೋಸ್ವಿನ್ ದ್ವಿತೀಯ ಹಾಗೂ ಜೋಯೆಲ್ ತೃತೀಯ ಸ್ಥಾನ ಪಡೆದರು.ಮೂರರಿಂದ ಐದನೇ ತರಗತಿ ವಿಭಾಗದ ಬೆಲೂನ್ ಸ್ಪೋಟಿಸುವ ಸ್ಪರ್ಧೆಯಲ್ಲಿ ಜೋವಿಲ್ ಪ್ರಥಮ,ಜೇಸ್ ದ್ವಿತೀಯ ಹಾಗೂ ಅವಿನ್ ತೃತೀಯ ಸ್ಥಾನ ಪಡೆದರು.

ಆರನೇ ಹಾಗೂ ಏಳನೇ ತರಗತಿ ವಿಭಾಗದ 100ಮೀ ಓಟದಲ್ಲಿ ಸ್ಟೀವನ್ ಪ್ರಥಮ,ಆಲೆನ್ ದ್ವಿತೀಯ, ಧೀಕ್ಷಿತ್ ತೃತೀಯ ಸ್ಥಾನ ಪಡೆದರು.ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಚಮಚದಲ್ಲಿ  ನಿಂಬೆಹಣ್ಣು,ಗೋಲಿ ಓಟದ ಸ್ಪರ್ಧೆಯಲ್ಲಿ  ಪ್ರಜ್ವಲ್ ಪ್ರಥಮ,ಪ್ರಿನ್ಸಿಯ ದ್ವಿತೀಯ ಸ್ಥಾನ ಪಡೆದರು.

ಗೋಣಿ ಚೀಲ ಓಟದಲ್ಲಿ ಸಿಸ್ಟರ್ ರೋಶನಿ ಪ್ರಥಮ ಹಾಗೂ ಡೈನಾ ಡಿಸೋಜ ದ್ವಿತೀಯ ಸ್ಥಾನ ಪಡೆದರು. ಪುರುಷರ 100*4 ರಿಲೆ ಓಟದಲ್ಲಿ ರೋಷನ್,ಸ್ಟೀವನ್,ಆಲೆನ್,ಅರುಣ್ ತಂಡ ಪ್ರಥಮ ಸ್ಥಾನ ಪಡೆದರೆ,ಮಹಿಳೆಯರ ರಿಲೇ ವಿಭಾಗದಲ್ಲಿ ಜೆನ್ನಿಫರ್,ಅನಿಶಾ,ದಿಲ್ಸಿನ್,ವಿನೀತ ಪ್ರಥಮ ಸ್ಥಾನ ಪಡೆದರು.ಹಗ್ಗ ಜಗ್ಗಾಟದ ಮಹಿಳೆಯರ ವಿಭಾಗದಲ್ಲಿ ಮರೀನಾ, ಶೀಲಾ, ವಿಕ್ಟೋರಿಯ, ಜೋಯ್ಲಿನ್, ಗ್ಲೆನ್ನಾ, ಅನಿತ, ಸುನೀತ, ಸುಚಿತ್ರ, ಮಾರ್ಗರೇಟ್, ಸಿಸ್ಟರ್ ಹಿಲ್ಡಾ ಲೋಬೊ, ಡೈನಾ, ದುಲ್ಸಿನ್, ಅರ್ಪಿತಾ,ವಿನೀತ, ರೀನಾ ಹಾಗೂ ಲೀನಾ ತಂಡ ಪ್ರಥಮ, ಪುರುಷರ ಸ್ಪರ್ಧೆಯಲ್ಲಿ ರೋನಿ ಮೋನಿಸ್, ಮೆಲ್ವಿನ್, ಹಿಲರಿ, ರೋಶನ್, ಅರುಣ್ ರೊಡ್ರಿಗಸ್, ವಿನ್ಸಿ, ವಲೇರಿಯನ್, ನವೀನ್ ಪ್ರಾನ್ಸಿಸ್ ಅವರ ತಂಡ ವಿಜೇತರಾದರು. ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ  ರೋನಿ, ನವೀನ್, ಪ್ರಾನ್ಸಿಸ್, ಆಸ್ಟಿನ್, ನವೀನ್ , ಪ್ರಕಾಶ್, ರುಡಾಲ್ಫ್ ತಂಡ ಪ್ರಥಮ ಸ್ಥಾನ ಪಡೆದರೆ, ಮಹಿಳೆಯರ ಥ್ರೋ ವಾಲಿಬಾಲ್ ಸ್ಪರ್ಧೆಯಲ್ಲಿ ಮರೀನಾ, ಶೀಲಾ, ವಿಕ್ಟೋರಿಯ, ಎಡ್ನಾ, ಜೋಯ್ಲಿನ್, ಗ್ಲೆನ್ನಾ, ಅನಿತಾ, ಸುನೀತ, ಸುಚಿತ್ರ ಅವರ ತಂಡ ಪ್ರಥಮ ಪ್ರಶಸ್ತಿ ಪಡೆಯಿತು.

ಮಹಿಳೆಯರ ಗೋಣಿ ಚೀಲ ಓಟ ಸಿಸ್ಟರ್ ರೋಶನಿ ಪ್ರಥಮ,ಎಲೀಶಾ ಧ್ವಿತೀಯ ಹಾಗೂ ಪ್ರಶಾಂತಿ ತೃತೀಯ ಸ್ಥಾನ  ಪಡೆದರು.ಗುಂಡು ಎಸೆತ ಪ್ರಾನ್ಸಿಸ್ ಪ್ರಥಮ ಸ್ಥಾನ ಪಡೆದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ