ಸುರತ್ಕಲ್ ಟೋಲ್ ರದ್ದುಗೊಂಡಿರುವುದರಿಂದ ಬಸ್ ಪ್ರಯಾಣದರ ಇಳಿಸಲು ಸಿಐಟಿಯು ಒತ್ತಾಯ - Mahanayaka
10:06 PM Sunday 15 - December 2024

ಸುರತ್ಕಲ್ ಟೋಲ್ ರದ್ದುಗೊಂಡಿರುವುದರಿಂದ ಬಸ್ ಪ್ರಯಾಣದರ ಇಳಿಸಲು ಸಿಐಟಿಯು ಒತ್ತಾಯ

udupi
14/12/2022

ಉಡುಪಿ: ಉಡುಪಿಯ ಜನತೆಯನ್ನು ಸುರತ್ಕಲ್ ಟೋಲ್ ಸುಂಕದ ಭಾರದಿಂದ ಬಿಡುಗಡೆಗೊಳಿಸಿದ್ದು, ಟಿಕೆಟ್ ಮೆಲೆ ವಿಧಿಸುತ್ತಿದ್ದ 5ರೂ. ಟೋಲ್ ಶುಲ್ಕವನ್ನು ಬಸ್ ಮಾಲಕರು ತಕ್ಷಣದಿಂದಲೇ ಕೈ ಬೀಡಬೇಕು ಎಂದು ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್. ಒತ್ತಾಯಿಸಿದ್ದಾರೆ

ಉಡುಪಿ ಗ್ರಾಮೀಣ ಭಾಗಗಳಿಗೆ ಸುರತ್ಕಲ್ ಮೂಲಕ ಸಂಚಾರಿಸುತ್ತಿದ್ದ ಖಾಸಗಿ ಸರ್ವಿಸ್ ಬಸ್ಸುಗಳು ಹಾಗೂ ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ ಗಳು ಟಿಕೆಟ್ ಮೇಲೆ ಟೋಲ್ ದರವನ್ನು ಸೇರಿಸಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸುವ ಮೂಲಕ ಟೋಲ್ ಸುಂಕದ ಹೊರೆಯನ್ನು ಪ್ರಯಾಣಿಕರ ಮೇಲೆ ಹೇರಲಾಗಿತ್ತು. ಇದರಿಂದ ದಿನಕೂಲಿ ನೌಕರರು, ಸಣ್ಣ ಪುಟ್ಟ ಅಂಗಡಿಗಳಲ್ಲಿ ದುಡಿಯುವ ಕಾರ್ಮಿಕರು ತಮ್ಮ ಗಳಿಕೆಯ ಹೆಚ್ಚಿನ ಪಾಲನ್ನು ಪ್ರಯಾಣಕ್ಕಾಗಿಯೇ ವ್ಯಯಿಸುತ್ತಿದ್ದಾರೆ.

ಇದೀಗ ಜನಸಾಮಾನ್ಯರ ನಿರಂತರ ಹೋರಾಟದಿಂದ ಸುರತ್ಕಲ್ ಟೋಲ್ ಗೇಟ್ ಶಾಶ್ವತವಾಗಿ ತೆರವುಗೊಂಡಿದೆಯಾದರು ಬಸ್ ಮಾಲಕರು ಟೋಲ್ ನೆಪದಲ್ಲಿ ಏರಿಸಿದ ದರವನ್ನು ಇಂದಿಗೆ 14ದಿನವಾದರು ಇಳಿಸಲು ಯಾವುದೇ ತೀರ್ಮಾನವನ್ನು ಕೈಗೊಂಡಿರುವುದಿಲ್ಲ.

ಸುರತ್ಕಲ್ ಟೋಲ್ ಸಂಗ್ರಹದ ನೆಪದಲ್ಲಿ ಏರಿಕೆಗೆ ಅವಕಾಶ ನೀಡಿದ ಉಡುಪಿ ಜಿಲ್ಲಾಡಳಿತ, ಸಾರಿಗೆ ಪ್ರಾಧಿಕಾರ ಏರಿಕೆ ಮಾಡಿದ ಪ್ರಯಾಣ ದರವನ್ನು ಇಳಿಸುವ ಕ್ರಮಕ್ಕು ಮುಂದಾಗಬೇಕು. ಈಗಾಗಲೇ ಸುರತ್ಕಲ್ ಟೋಲ್ ರದ್ದಾಗಿ ಇಂದಿಗೆ 14 ದಿನ ಕಳೆದಿದೆ ದಿನಕ್ಕೆ 16ಲಕ್ಷದಂತೆ ಜನತೆಗೆ ಉಳಿತಾಯವಾಗಿದ್ದೂ ಬರೋಬ್ಬರಿ2.24ಕೋಟಿ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಗಳು ಈ ಕೂಡಲೇ ಬಸ್ ಪ್ರಯಾಣದ ದರ ಇಳಿಕೆ ಕುರಿತು ಬಸ್ಸು ಮಾಲಿಕರಿಗೆ ಸೂಚನೆಯನ್ನು ನೀಡಬೇಕು. ಅಗತ್ಯ ಬಿದ್ದಲ್ಲಿ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ಚರ್ಚಿಸಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ