ಏರ್ ಶೋ ಪ್ರದರ್ಶನದ ವೇಳೆ ವಿಮಾನಗಳ ನಡುವೆ ಡಿಕ್ಕಿ:  ಪೈಲಟ್ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ - Mahanayaka

ಏರ್ ಶೋ ಪ್ರದರ್ಶನದ ವೇಳೆ ವಿಮಾನಗಳ ನಡುವೆ ಡಿಕ್ಕಿ:  ಪೈಲಟ್ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

portugal
03/06/2024

ಏರ್ ಶೋ ಪ್ರದರ್ಶನದ ವೇಳೆ ಎರಡು ವಿಮಾನಗಳ ನಡುವೆ  ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪೈಲಟ್ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಪೋರ್ಚುಗಲ್ ನಲ್ಲಿ ನಡೆದಿದೆ.


Provided by

ಸಂಭ್ರಮದಿಂದ ಆರಂಭಗೊಂಡಿದ್ದ  ಏರ್ ಶೋ ಪ್ರದರ್ಶನ ಈ ಅಪಘಾತದ ಕಾರಣ ಕ್ಷಣ ಮಾತ್ರದಲ್ಲೇ ದುಃಖದ ಸನ್ನಿವೇಶವನ್ನು ಸೃಷ್ಟಿಸಿತು. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜೂನ್ 2ರಂದು  6 ವಿಮಾನಗಳು ಏರ್ ಶೋ ನಡೆಸುತ್ತಿದ್ದವು. ಈ ವೇಳೆ ಎರಡು ವಿಮಾನಗಳ ನಡುವೆ ಅಪಘಾತ ಸಂಭವಿಸಿದೆ. ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ನಂತರ ಒಂದು ವಿಮಾನ ನೆಲಕ್ಕೆ ಅಪ್ಪಳಿಸಿದ್ದು, ಬೆಂಕಿ ಹತ್ತಿಕೊಂಡು ಉರಿಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅಪಘಾತಕ್ಕೆ ನಿಖರ ಕಾರಣಗಳು ತಿಳಿದು ಬಂದಿಲ್ಲ, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಪಘಾತಕ್ಕೀಡಾದ ವಿಮಾನ ಮೇಲಕ್ಕೆ ಏರುತ್ತಿದ್ದಂತೆಯೇ ಮತ್ತೊಂದು ವಿಮಾನವನ್ನು ಸ್ಪರ್ಶಿಸಿದ್ದರಿಂದ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸರಿಯಾದ ಪೂರ್ವ ತಯಾರಿಗಳಿಲ್ಲದೇ ಏರ್ ಶೋ ಹಮ್ಮಿಕೊಳ್ಳಲಾಗಿತ್ತೇ ಎನ್ನುವ ಅನುಮಾನಗಳು ಕೂಡ ಸೃಷ್ಟಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ