ನಾಗಮಂಗಲ ಗಣಪತಿ ವಿಸರ್ಜನೆ ಗಲಭೆಯಲ್ಲಿ ತೊಂದರೆಯಾದ ಅಂಗಡಿಯವರಿಗೆ ಪರಿಹಾರ ವಿತರಣೆ
ಮೈಸೂರು: ಇತ್ತೀಚೆಗೆ (ಸೆಪ್ಟೆಂಬರ್) ಮಾಹೆಯಲ್ಲಿ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಲ್ಲಿ ಕೆಲವರ ಅಂಗಡಿ ಮುಂಗಟ್ಟುಗಳಿಗೆ ಬೆಂಕಿಯ ಅವಘಡದಿಂದ ಸುಮಾರು 22 ಜನ ವ್ಯಾಪರಸ್ಥರಿಗೆ ವೃತ್ತಿ ಜೀವನ ನಡೆಸಲು ತೊಂದರೆಯಾಗಿತ್ತು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವ್ಯಾಪಾರಸ್ಥರ ಕಷ್ಟವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೇವಲ 10 ಸಾವಿರ ಪರಿಹಾರ ನೀಡಿದರೆ ಜೀವನ ಕಟ್ಟಿಕೊಳ್ಳಲು ಕಷ್ಟಕರವಾಗುತ್ತದೆ ಎಂದು ತೊಂದರೆಗೊಳಗಾದ ವ್ಯಾಪಾರಸ್ಥರು ಹಾಗೂ ಅಂಗಡಿ ಮಾಲೀಕರ ಪರವಾಗಿ ಮನವಿ ಮಾಡಿ ಒಟ್ಟು 76,45,000/- ರೂ ಪರಿಹಾರ ಧನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರು ಇಂದು ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ 22 ಅಂಗಡಿ ಮಾಲೀಕರಿಗೆ ರೂ 26,45,000/– ಹಾಗೂ 22 ವ್ಯಾಪರಸ್ಥರಿಗೆ ರೂ 47,85,000/– ಪರಿಹಾರ ಮಂಜೂರಾತಿ ಪತ್ರವನ್ನು ವಿತರಿಸಿದರು.
ಸರ್ಕಾರದಿಂದ ಇಂತಹ ಅವಘಡ ಪ್ರಕರಣಗಳಲ್ಲಿ ಸುಮಾರು ರೂ 10,000/– ಮಾತ್ರ ಪರಿಹಾರ ನೀಡಲಾಗುತ್ತಿತ್ತು, ಇದರಿಂದ ವೃತ್ತಿ ಜೀವನ ಪುನ: ಕಟ್ಟಿಕೊಳ್ಳಲು ಸಕಾಗುವುದಿಲ್ಲ ಎಂದು ಮನಗಂಡು ಸರ್ಕಾರ ಈ ಬಾರಿ ದೊಡ್ಡ ಮೊತ್ತದ ಪರಿಹಾರ ನೀಡಿದೆ ಎಂದರು.
ವೈಯಕ್ತಿಕವಾಗಿ 10 ಸಾವಿರ ಪರಿಹಾರ ಕೃಷಿ ಸಚಿವರು ಇದೇ ಸಂದರ್ಭದಲ್ಲಿ ಅವಘಡದಲ್ಲಿ ತೊಂದರೆಯಾಗಿರುವ ಅಂಗಡಿಯವರಿಗೆ 10 ಸಾವಿರ ವೈಯಕ್ತಿಕ ಪರಿಹಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: