ಬಿಗ್ ಬಾಸ್ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಬಿರುಕು: ತಂದೆ ತಾಯಿ ಜೊತೆ ಸೇರಿ ಪತ್ನಿಗೆ ಹಲ್ಲೆ? - Mahanayaka

ಬಿಗ್ ಬಾಸ್ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಬಿರುಕು: ತಂದೆ ತಾಯಿ ಜೊತೆ ಸೇರಿ ಪತ್ನಿಗೆ ಹಲ್ಲೆ?

sameer acharya
30/09/2024

ಮಾಜಿ ಬಿಗ್ ಬಾಸ್ ಸ್ಪರ್ಧಿ, ಕನ್ನಡದ ಕೋಟ್ಯಾಧಿಪತಿ ಖ್ಯಾತಿಯ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಸಮೀರ್ ಆಚಾರ್ಯ ಪತ್ನಿ, ತನ್ನ ಪತಿ ಹಾಗೂ ಅತ್ತೆ ಮಾವನ ವಿರುದ್ಧ ಹುಬ್ಬಳ್ಳಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ.

ಮಗು ಅಳುತ್ತಿದ್ದ ಕಾರಣಕ್ಕೆ ಸಮೀರ್ ಪತ್ನಿ ಶ್ರಾವಣಿ ಗದರಿಸಿದ್ರಂತೆ, ಈ ವಿಚಾರಕ್ಕೆ ಸಮೀರ್ ತಂದೆ ಶ್ರಾವಣಿಗೆ ಬೈದಿದ್ದರಂತೆ, ಇದೇ ವಿಷಯ ದೊಡ್ಡದಾಗಿ ಬೆಳೆದು ಸಮೀರ್ ತಮ್ಮ ತಂದೆ ತಾಯಿಯ ಜೊತೆ ಸೇರಿ ಪತ್ನಿಗೆ ಮನ ಬಂದಂತ ಹಲ್ಲೆ ಮಾಡಿದ್ದಾರೆ ಎಂದು ಶ್ರಾವಣಿ ಆರೋಪಿಸಿದ್ದಾರೆಂದು ವರದಿಯಾಗಿದೆ.

ಸಮೀರ್ ಹಲ್ಲೆ ನಡೆಸುವ ವೇಳೆ ಶ್ರಾವಣಿ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಹೋಗಿದ್ದು, ಈ ವೇಳೆ ಸಮೀರ್ ಮೊಬೈಲ್ ನ್ನು ಒಡೆದು ಹಾಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇನ್ನೊಂದೆಡೆ ಸಮೀರ್ ತಂದೆಯ ತಲೆಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಘಟನೆಯ ಬಳಿಕ ಠಾಣೆಯಲ್ಲಿ ಕೌನ್ಸಲಿಂಗ್ ಮಾಡಿದ ಪೊಲೀಸರು ದಂಪತಿ, ಅತ್ತೆ–ಮಾವರನ್ನ ಒಂದು ಮಾಡಿ ಮನೆಗೆ ಕಳಿಸಿದ್ದಾರೆ. ಕೌನ್ಸೆಲಿಂಗ್ ಬಳಿಕ ಇನ್ಮುಂದೆ ಹೀಗೆ ಆಗುವುದಿಲ್ಲ ಎಂದು ಹೇಳಿ ಯಾವುದೇ ದೂರು ದಾಖಲಿಸದೇ ಬಂದಿದ್ದಾರೆ ಎಂದು ವರದಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ