ಬಿಗ್ ಬಾಸ್ 11: ಯಾವ ಸ್ಪರ್ಧಿಗಳು ಸ್ವರ್ಗಕ್ಕೆ, ಯಾವ ಸ್ಪರ್ಧಿಗಳು ನರಕಕ್ಕೆ ಹೋಗಿದ್ದಾರೆ - Mahanayaka
2:59 PM Saturday 14 - December 2024

ಬಿಗ್ ಬಾಸ್ 11: ಯಾವ ಸ್ಪರ್ಧಿಗಳು ಸ್ವರ್ಗಕ್ಕೆ, ಯಾವ ಸ್ಪರ್ಧಿಗಳು ನರಕಕ್ಕೆ ಹೋಗಿದ್ದಾರೆ

bigg boss kannada season 11
30/09/2024

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿರೋದೇನೋ ಆಯ್ತು.. ಇನ್ನೇನಿದ್ದರೂ ನೇರವಾಗಿ ಆಟವೇ ಶುರುವಾಗ್ತಿದೆ. ಇಲ್ಲಿಯವರೆಗೆ ಯಾರು ಅಭ್ಯರ್ಥಿಗಳಾಗ್ತಾರೆ ಅನ್ನೋ ಕುತೂಹಲವಿತ್ತು. ಇದೀಗ ಸ್ವರ್ಗ ನರಕಕ್ಕೆ ಸೇರಿರುವ ಸ್ಪರ್ಧಿಗಳು ಯಾರು ಅನ್ನೋ ಕುತೂಹಲ ವೀಕ್ಷಕರದ್ದಾಗಿದೆ. ಸ್ವರ್ಗ ನರಕ ಅನ್ನೋ ಆಟ ವೀಕ್ಷಕರಿಗೆ ಗೊಂದಲ ಮಯವಾಗಿದೆ. ಆದ್ರೆ, ಯಾವ ಸ್ಪರ್ಧಿಗಳು ಸ್ವರ್ಗಕ್ಕೆ ಸೇರಿದ್ದಾರೆ, ಯಾವ ಸ್ಪರ್ಧಿಗಳು ನರಕಕ್ಕೆ ಸೇರಿದ್ದಾರೆ ಅನ್ನೋ ಮಾಹಿತಿ ನಾವಿಲ್ಲಿ ನೀಡಿದ್ದೇವೆ ನೋಡಿ..

ಬಿಗ್ ಬಾಸ್ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ನೀಡಿದ್ದಾರೆ. 17 ಜನರ ಪೈಕಿ 10 ಜನರು ಸ್ವರ್ಗಕ್ಕೆ ಹೋಗಿದ್ದಾರೆ. ಉಳಿದ 7 ಸ್ಪರ್ಧಿಗಳು ನರಕಕ್ಕೆ ಹೋಗಿದ್ದಾರೆ.

ಸ್ವರ್ಗಕ್ಕೆ ಹೋದ ಸ್ಪರ್ಧಿಗಳು:

ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್​, ಗೌತಮಿ, ಧರ್ಮ, ಜಗದೀಶ್​, ತ್ರಿವಿಕ್ರಮ್​, ಹಂಸಾ, ಐಶ್ವರ್ಯಾ, ಮಂಜು ಈ 10 ಸ್ಪರ್ಧಿಗಳು ಸ್ವರ್ಗವಾಸಿಗಳಾಗಿದ್ದಾರೆ.

ನರಕಕ್ಕೆ ಹೋದ ಸ್ಪರ್ಧಿಗಳು:

ಅನುಷಾ ರೈ, ಶಿಶಿರ್​, ಮಾನಸಾ, ಗೋಲ್ಡ್​ ಸುರೇಶ್​ ಚೈತ್ರಾ, ಮೋಕ್ಷಿತಾ, ರಂಜಿತ್​ ನರಕಲೋಕದ ವಾಸಿಗಳಾಗಿದ್ದಾರೆ.

ರಾಜಾರಾಣಿ ಗ್ರ್ಯಾಂಡ್​ ಫಿನಾಲೆ ಸಮಯಲ್ಲಿ ರಿವೀಲ್​ ಆಗಿದ್ದ ನಾಲ್ಕು ಸ್ಪರ್ಧಿಗಳಲ್ಲಿ ಇಬ್ಬರೂ ಜಗದೀಶ್​ ಹಾಗೂ ಗೌತಮಿ ಜನರ ವೋಟಿಂಗ್​ ಆಧಾರದ ಮೇಲೆ ಸ್ವರ್ಗಕ್ಕೆ ಹೋದ್ರು. ಅದೇ ರೀತಿ ಅತೀ ಹೆಚ್ಚು ವೋಟ್ ಪಡೆದು ಚೈತ್ರಾ, ಗೋಲ್ಡ್​ ಸುರೇಶ್​ ನರಕಕ್ಕೆ ಕಾಲಿಟ್ಟಿದ್ದಾರೆ.

ಸ್ವರ್ಗದಲ್ಲಿ ಐಶಾರಾಮಿ ವ್ಯವಸ್ಥೆಗಳಿದ್ದರೆ, ನರಕದಲ್ಲಿ ಸಾಮಾನ್ಯವಾದ ವ್ಯವಸ್ಥೆಗಳಿವೆ. ಸ್ವರ್ಗ ನರಕದಲ್ಲಿ ಹೇಗೆ ಸ್ಪರ್ಧಿಗಳಿಗೆ ಟಾಸ್ಕ್ ನಡೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಕನ್ನಡ ಬಿಗ್ ಬಾಸ್ ಎಲ್ಲ ಭಾಷೆಗಳ ಬಿಗ್ ಬಾಸ್ ಶೋಗಿಂತ ಭಿನ್ನವಾಗಿದೆ. ಹೀಗಾಗಿ ಈ ಬಾರಿ ಸ್ವರ್ಗ ನರಕದ ಆಟ ಹೇಗಿರಲಿದೆ ಅನ್ನೋದು ವೀಕ್ಷಕರಿಗೆ ಕುತೂಹಲ ಮೂಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ