ಹರ್ಯಾಣದಲ್ಲಿ 14 ಗ್ಯಾರೆಂಟಿಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್
ನವದೆಹಲಿ: ಹರ್ಯಾಣ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆ ಘೋಷಣೆ ಮಾಡಿದೆ. ಪ್ರಣಾಳಿಕೆಯಲ್ಲಿ ಭರ್ಜರಿ ಭರವಸೆಗಳನ್ನ ನೀಡಿದೆ.
ಒಟ್ಟು 14 ಭರವಸೆಗಳ ಪ್ರಣಾಳಿಕೆಯನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುಗಡೆ ಮಾಡಿದ್ರು, ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹಲೋತ್ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ನ 14 ಭರವಸೆಗಳು ಹೀಗಿದೆ:
* ಪ್ರತಿ ಕುಟುಂಬಕ್ಕೆ 300 ಯೂನಿಟ್ ಉಚಿತ ವಿದ್ಯುತ್
* ಪ್ರತಿಯೊಬ್ಬರಿಗೂ ರೂ. 25 ಲಕ್ಷದವರೆಗೆ ಉಚಿತ ವೈದ್ಯಕೀಯ ಸೌಲಭ್ಯ
* ಮನೆಯ ಒಡತಿಯರಿಗೆ ತಲಾ ರೂ.2 ಸಾವಿರ ಪಾವತಿ
* ರೂ.500ಕ್ಕೆ ಗ್ಯಾಸ್ ಸಿಲಿಂಡರ್ ನೀಡಲಾಗುವುದು.
* 2 ಲಕ್ಷ ಖಾಲಿ ಹುದ್ದೆಗಳಿಗೆ ನೇಮಕಾತಿ
* ಡ್ರಗ್ ಮುಕ್ತ ಹರಿಯಾಣ ಉಪಕ್ರಮದ ಭರವಸೆ
* ರೂ. 6,000 ವೃದ್ಧಾಪ್ಯ ವೇತನ, ರೂ.6,000 ಅಂಗವಿಕಲ ಪಿಂಚಣಿ, ರೂ. 6,000 ವಿಧವಾ ವೇತನ ನೀಡುವುದು
* ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿ ಭರವಸೆ
* ಜಾತಿ ಗಣತಿಯನ್ನು ನಡೆಸುವ ಭರವಸೆ
* ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಮತ್ತು ಬೆಳೆ ಪರಿಹಾರದ ಕಾನೂನು ಖಾತರಿ ಭರವಸೆ
* ಬಡವರಿಗೆ ರೂ.3.5 ಲಕ್ಷ ವೆಚ್ಚದ ಮನೆಗಳ ನಿರ್ಮಾಣ ಸೇರಿದಂತೆ
ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: