‘ತೈಮೂರ್’ ಹೇಳಿಕೆ: ಕವಿ ಕುಮಾರ್ ವಿಶ್ವಾಸ್ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಸಂಸದ
ಬಾಲಿವುಡ್ ದಂಪತಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರ ಬಗ್ಗೆ ಇತ್ತೀಚೆಗೆ ನೀಡಿದ ವಿವಾದತ್ಮಕ ಹೇಳಿಕೆಗಾಗಿ ಕವಿ ಕುಮಾರ್ ವಿಶ್ವಾಸ್ ಅವರ ವಿರುದ್ಧ ಅಮೇಥಿಯ ಕಾಂಗ್ರೆಸ್ ಸಂಸದ ಕಿಶೋರಿ ಲಾಲ್ ಶರ್ಮಾ ಕಿಡಿಕಾರಿದ್ದಾರೆ.
ಮೊರಾದಾಬಾದ್ ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ವಿಶ್ವಾಸ್, ಸೈಫ್ ಅಥವಾ ಕರೀನಾ ಹೆಸರನ್ನು ಉಲ್ಲೇಖಿಸದೇ ತಮ್ಮ ಮಗನಿಗೆ ತೈಮೂರ್ ಗೆ “ಆಕ್ರಮಣಕಾರ” ಹೆಸರಿಡುವ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಶತ್ರುಘ್ನ ಸಿನ್ಹಾ ಮತ್ತು ಅವರ ಮಗಳು ಸೋನಾಕ್ಷಿ ಸಿನ್ಹಾ ಅವರ ಅಂತರ್ಧರ್ಮೀಯ ವಿವಾಹವನ್ನು ಪರೋಕ್ಷವಾಗಿ ಉಲ್ಲೇಖಿಸುವ ಮೂಲಕ ವಿಶ್ವಾಸ್ ವಿವಾದವನ್ನು ಹುಟ್ಟುಹಾಕಿದ್ದರು.
ತಮ್ಮ ಕ್ಷೇತ್ರದ ಪ್ರವಾಸದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಾ, ವಿಶ್ವಾಸ್ ಅವರು ಮಹಾನ್ ಸ್ಥಾನಮಾನದ ಕವಿ ಆಗಿರಬಹುದು. ಆದರೆ ಅವರು ಯಾರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj