ಕಾಂಗ್ರೆಸ್ ಗೆದ್ದರೂ ಸೋತ ಅಝರುದ್ದೀನ್: ಮಾಜಿ ಕ್ರಿಕೆಟಿಗನ ಸೋಲಿಗೆ ಯಾರು ಕಾರಣ..? - Mahanayaka

ಕಾಂಗ್ರೆಸ್ ಗೆದ್ದರೂ ಸೋತ ಅಝರುದ್ದೀನ್: ಮಾಜಿ ಕ್ರಿಕೆಟಿಗನ ಸೋಲಿಗೆ ಯಾರು ಕಾರಣ..?

04/12/2023

ಜಿದ್ದಾಜಿದ್ದಿನ ಕಣವಾಗಿದ್ದ ತೆಲಂಗಾಣದ ಜುಬ್ಲಿಹಿಲ್ಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮುಹಮ್ಮದ್ ಅಝರುದ್ದೀನ್ ಸೋಲನುಭವಿಸಿದ್ದಾರೆ.
ಜುಬ್ಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಆರ್‌ಎಸ್‌ನ ಹಾಲಿ ಶಾಸಕ ಮಾಗಂಟಿ ಗೋಪಿನಾಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಮುಹಮ್ಮದ್ ಅಝರುದ್ದೀನ್ ಅವರನ್ನು ಸೋಲಿಸಿದ್ದಾರೆ. ಬಿಜೆಪಿಯ ಲಂಕಾಳ ದೀಪಕ್ ರೆಡ್ಡಿ ಮೂರನೇ ಸ್ಥಾನ ಗಳಿಸಿದರು.

ಜುಬಿಲಿ ಹಿಲ್ಸ್ ಸಿಕಂದ್ರಾಬಾದ್ ಸಂಸದೀಯ ಕ್ಷೇತ್ರದ ಭಾಗವಾಗಿದೆ. ಹೈದರಾಬಾದ್ ಜಿಲ್ಲೆ ಮತ್ತು ಗ್ರೇಟರ್ ಹೈದರಾಬಾದ್ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಇದನ್ನು ನಗರ ಕ್ಷೇತ್ರ ಎಂದು ವರ್ಗೀಕರಿಸಲಾಗಿತ್ತು.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕಾಂಗ್ರೆಸ್ ನಾಯಕ ಮುಹಮ್ಮದ್ ಅಝರುದ್ದೀನ್ ಅವರು ತಮ್ಮ ತವರು ಕ್ಷೇತ್ರವಾದ ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಚೊಚ್ಚಲ ಚುನಾವಣೆಯಲ್ಲಿ ಸೋತಿದ್ದಾರೆ. ಅಜರುದ್ದೀನ್ ಅವರು ಹಾಲಿ ಶಾಸಕ ಮತ್ತು ಬಿಆರ್ ಎಸ್ ಅಭ್ಯರ್ಥಿ ಮಾಗಂಟಿ ಗೋಪಿನಾಥ್ ವಿರುದ್ಧ 16,000 ಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ. ಅಝರುದ್ದೀನ್ ಅವರು ಕೇವಲ 64,212 ಮತಗಳನ್ನು ಪಡೆದ್ರೆ ಗೋಪಿನಾಥ್ 80,549 ಮತಗಳನ್ನು ಪಡೆದರು. ಬಿಜೆಪಿಯ ಎಲ್.ದೀಪಕ್ ರೆಡ್ಡಿ 25,866 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇತ್ತೀಚಿನ ಸುದ್ದಿ