ಕೊರೊನಾ ವೈರಸ್ ಗೆ ಕೆಂಪಿರುವೆ ಚಟ್ನಿಯೇ ಮದ್ದು | ಶೀಘ್ರವೇ ಆಯುಷ್ ಇಲಾಖೆ ನೀಡಲಿದೆ ಸ್ಪಷ್ಟ ಉತ್ತರ - Mahanayaka

ಕೊರೊನಾ ವೈರಸ್ ಗೆ ಕೆಂಪಿರುವೆ ಚಟ್ನಿಯೇ ಮದ್ದು | ಶೀಘ್ರವೇ ಆಯುಷ್ ಇಲಾಖೆ ನೀಡಲಿದೆ ಸ್ಪಷ್ಟ ಉತ್ತರ

02/01/2021

ಭುವನೇಶ್ವರ:  ಒಂದೆಡೆ ಕೊರೊನಾ ಲಸಿಕೆಯ ವಿಚಾರ ಚರ್ಚೆಯಾಗುತ್ತಿದ್ದರೆ, ಇತ್ತ ಕೊರೊನಾಕ್ಕೆ ಕೆಂಪಿರುವೆ ಹಾಗೂ ಅದರ ಮೊಟ್ಟೆಯ ಚಟ್ನಿ ಉತ್ತಮ ಮದ್ದು ಎಂದು ಹೇಳಲಾಗಿದೆ.


Provided by

ಕೆಂಪಿರುವೆ ಚಟ್ನಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತದೆ ಎಂದು ಸಂಶೋಧಕರೊಬ್ಬರು ಹೇಳಿದ್ದು, ಈ ಸಂಬಂಧ ಮಾಹಿತಿ ನೀಡುವಂತೆ  ಒಡಿಶಾ ಹೈಕೋರ್ಟ್  ನಿರ್ದೇಶನ ನೀಡಿದೆ.

ಕೆಂಪಿರುವೆ ಚಡ್ನಿಯಲ್ಲಿ ಫಾರ್ಮಿಕ್ ಆ್ಯಸಿಡ್, ಪ್ರೋಟೀನ್, ಕ್ಯಾಲ್ಸಿಯಮ್, ವಿಟಮಿನ್ ಬಿ12, ಜಿಂಕ್ ಮತ್ತು ಕಬ್ಬಿಣಾಂಶವೂ ಅಧಿಕವಾಗಿರುವುದರಿಂದ ಕೊವಿಡ್ ಗೆ ಕೆಂಪಿರುವ ಚಟ್ನಿ  ಪರಿಣಾಮಕಾರಿ  ಮದ್ದು ಎಂದು  ಎಂಜಿನಿಯರ್ ಮತ್ತು ಸಂಶೋಧಕ ನಯಾಧರ್ ಪಡಿಯಾಲ್  ಅರ್ಜಿಸಲ್ಲಿಸಿದ್ದರು.

ರಾಜ್ಯದಲ್ಲಿ ಕೆಂಪಿರುವ ಚಟ್ನಿಯಿಂದ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಗಳು ನಿವಾರಣೆಯಾಗಿದೆ. ಹಾಗಾಗಿ  ಕೊರೊನಾ ವೈರಸ್ ಗೆ ಕೂಡ ಈ ಮದ್ದು ಆಗಬಹುದು. ಹಸಿಮೆಣಸನ್ನು ಹಾಕಿ ಮಾಡಲಾಗುವ ಈ ಚಟ್ನಿ ರೋಗಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಒಡಿಶಾ ಹೈಕೋರ್ಟ್, ಆಯುಷ್ ಸಚಿವಾಲಯ ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಗೆ ನಿರ್ದೇಶನ ನೀಡಿದ್ದು, 3 ತಿಂಗಳೊಳಗೆ  ಈ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದೆ.

ಇತ್ತೀಚಿನ ಸುದ್ದಿ