ಅಡಾಲ ಮಸೀದಿಯ ಸರ್ವೇ ನಡೆಸಬೇಕೆಂಬ ಕೋರಿಕೆ: ಕೋರ್ಟ್ ನಿಂದ ಅವಕಾಶ ನಿರಾಕರಣೆ
![](https://www.mahanayaka.in/wp-content/uploads/2024/12/e329705332c7aa83946f6aa8b85e213a6fe9c1f1adbfed34a4e761023981ed9c.0.jpg)
ಅಡಾಲ ಮಸೀದಿಯ ಸರ್ವೇ ನಡೆಸಬೇಕು ಎಂಬ ಕೋರಿಕೆಯನ್ನು ಉತ್ತರಪ್ರದೇಶದ ನ್ಯಾಯಾಲಯ ತಿರಸ್ಕರಿಸಿದೆ. ಇತ್ತೀಚಿಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಅನ್ವಯ ಉತ್ತರಪ್ರದೇಶದ ನ್ಯಾಯಾಲಯವು ಈ ನಿರ್ಧಾರಕ್ಕೆ ಬಂದಿದೆ. 1991ರ ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆಯ ವಿರುದ್ಧ ಬರುವ ಯಾವುದೇ ಅರ್ಜಿಯ ಬಗ್ಗೆ ಮಧ್ಯಂತರ ತೀರ್ಪನ್ನೋ ಅಥವಾ ಅಂತಿಮ ತೀರ್ಪನ್ನೋ ನೀಡಬಾರದು ಎಂದು ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಕಳೆದ ವಾರ ಆದೇಶ ನೀಡಿತ್ತು.
ಜೂನ್ಪುರ್ ಸಿವಿಲ್ ಜಡ್ಜ್ ಸುಧಾ ಶರ್ಮ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಬಲಪಂಥೀಯ ಸ್ವರಾಜ್ ವಾಹಿನಿ ಅಸೋಸಿಯೇಷನ್ ಎಂಬ ಸಂಘಟನೆಯು ಈ ಕುರಿತಂತೆ ಅರ್ಜಿ ಸಲ್ಲಿಸಿತ್ತು. 14ನೇ ಶತಮಾನದಲ್ಲಿ ನಿರ್ಮಿಸಲಾದ ಈ ಮಸೀದಿಯು ನಿಜವಾಗಿ ಹಿಂದು ಮಂದಿರವಾಗಿದೆ ಮತ್ತು ಅಡಾಲ ದೇವಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು ಫಿರೋಜ್ ತುಗ್ಲಕ್ ಆಡಳಿತಕ್ಕೆ ಬಂದ ಬಳಿಕ 13ನೇ ಶತಮಾನದಲ್ಲಿ ಮಂದಿರವನ್ನು ಒಡೆದು ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಯವರು ಯಾವುದೇ ಆದೇಶವನ್ನು ನೀಡಲು ನಿರಾಕರಿಸಿದರು.
ಅತಿ ಮಹತ್ವಪೂರ್ಣ ಎಂದು ಹೇಳಲಾದ 1991ರ ಆರಾಧನಾಗಳ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿ ಆರಾಧನಾಲಯಗಳ ಮೇಲೆ ಹಕ್ಕು ಸ್ಥಾಪಿಸಿಕೊಂಡು ಬರುವ ಯಾವುದೇ ಹೊಸ ಅರ್ಜಿಯನ್ನು ಕೋರ್ಟುಗಳು ಸ್ವೀಕರಿಸಬಾರದು ಎಂದು ಚೀಫ್ ಜಸ್ಟಿಸ್ ಸಂಜಯ್ ಖನ್ನ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್ ಬೆಂಚ್ ಕಳೆದ ವಾರ ತೀರ್ಪು ನೀಡಿತ್ತು. ಈ ಆರಾಧನಾಲಯಗಳ ಸಂರಕ್ಷಣಾ ಕಾಯ್ದೆಯ ಪರಾಮರ್ಶೆ ನಡೆಸುವುದಾಗಿಯೂ ಸುಪ್ರೀಂ ಕೋರ್ಟ್ ಹೇಳಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj