ಶೇ.80ರಷ್ಟು ಕೊರೊನಾ ಸಾವು ಪ್ರಕರಣ ಈ 10 ರಾಜ್ಯಗಳಿಂದ ವರದಿಯಾಗುತ್ತಿದೆ | ಬಲಿಯಾದವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು - Mahanayaka
3:24 PM Saturday 2 - December 2023

ಶೇ.80ರಷ್ಟು ಕೊರೊನಾ ಸಾವು ಪ್ರಕರಣ ಈ 10 ರಾಜ್ಯಗಳಿಂದ ವರದಿಯಾಗುತ್ತಿದೆ | ಬಲಿಯಾದವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚು

25/10/2020

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನಿಂದ ಬಲಿಯಾಗುತ್ತಿರುವ ಸಂಖ್ಯೆಯು ಈ 10 ರಾಜ್ಯಗಳಿಂದ ಶೇ.80ರಷ್ಟು ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದ್ದು,  ಹೊಸ ಸಾವು ಪ್ರಕರಣಗಳು ಇದೇ 10 ರಾಜ್ಯಗಳಿಂದ ಪ್ರಮುಖವಾಗಿ ವರದಿಯಾಗುತ್ತಿವೆ ಎಂದು ಸಚಿವಾಲಯ ಹೇಳಿದೆ.

ಮಹಾರಾಷ್ಟ್ರ(43,152), ತಮಿಳುನಾಡು(10,893), ಕರ್ನಾಟಕ(10,892), ಪಶ್ಚಿಮ ಬಂಗಾಳ(1,793), ಛತ್ತೀಸ್ ಗಡ(1,793), ಉತ್ತರಪ್ರದೇಶ(6,854), ಕೇರಳ(1,306), ದೆಹಲಿ(6,225), ಪಂಜಾಬ್ ಮತ್ತು ಆಂಧ್ರಪ್ರದೇಶ(4,107)ಈ 10 ರಾಜ್ಯಗಳಲ್ಲಿ ಶೇ.80ರಷ್ಟು ಕೊರೊನಾ ಸಾವು ವರದಿಯಾಗಿವೆ ಎಂದು ಅಂಕಿ ಅಂಶಗಳು ಹೇಳಿವೆ.

ಮಹಿಳೆಯರಿಗಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಈ ಮಾರಕ ವೈರಸ್ ಗೆ ಬಲಿಯಾಗುತ್ತಿದ್ದಾರೆ. ಕೊರೊನಾಕ್ಕೆ ಶೇ.70 ಪುರುಷರು ಬಲಿಯಾಗಿದ್ದರೆ, ಶೇ.30ರಷ್ಟು ಮಹಿಳೆಯರು ಬಲಿಯಾಗಿದ್ದಾರೆ. ದೇಶದಲ್ಲಿ ಕೊರೊನಾ ಪಾಸಿಟಿವ್ ಬಂದವರಲ್ಲಿ ಸಾವಿನ ಸಂಖ್ಯೆ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ