ಅತ್ಯಾಚಾರವನ್ನು ಪ್ರತಿಭಟಿಸಿದ 15ರ ಬಾಲಕಿಯನ್ನು ಟೆರೆಸ್ ನಿಂದ ಕೆಳಗೆ ಎಸೆದ ಕಾಮುಕರು - Mahanayaka

ಅತ್ಯಾಚಾರವನ್ನು ಪ್ರತಿಭಟಿಸಿದ 15ರ ಬಾಲಕಿಯನ್ನು ಟೆರೆಸ್ ನಿಂದ ಕೆಳಗೆ ಎಸೆದ ಕಾಮುಕರು

25/10/2020

ನವದೆಹಲಿ: 15 ವರ್ಷದ ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿ, ವಿಫಲವಾದ ಮೂವರು ಯುವಕರ ತಂಡವು ಆಕೆಯನ್ನು ಟೆರೆಸ್ ನಿಂದ ಕೆಳಕ್ಕೆ ಎತ್ತಿ ಎಸೆದಿರುವ ಘಟನೆ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿ ನಡೆದಿದೆ.

ಮೂವರು ಆರೋಪಿಗಳು ಬಾಲಕಿಯನ್ನು ಬಲವಂತವಾಗಿ ಟೆರೆಸ್ ಗೆ ಎಳೆದುಕೊಂಡು ಹೋಗಿದ್ದು, ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಈ ವೇಳೆ ಬಾಲಕಿಯು ಪ್ರತಿಭಟಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಕಾಮುಕರು, ಬಾಲಕಿಯನ್ನು ಟೆರೆಸ್ ನಿಂದ ಕೆಳಕ್ಕೆ ಎತ್ತಿ ಎಸೆದಿದ್ದಾರೆ ಎಂದು ಬಾಲಕಿಯ ಹೆತ್ತವರು ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಬಾಲಕಿಯ ಹೆತ್ತವರ ಹೇಳಿಕೆಯ ಪ್ರಕಾರ ಮೂವರು ಯುವಕರ ವಿರುದ್ಧ ನಾವು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಬಾಲಕಿಗೆ ಗಂಭೀರವಾಗಿ ಗಾಯವಾಗಿದೆ. ಆಕೆಯನ್ನು ಅಜಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಎಸ್‌ ಪಿ ಸುಶೀಲ್ ಧುಲೆ ತಿಳಿಸಿದ್ದಾರೆ.

ಇನ್ನೂ ಈಗಾಗಲೇ ಆರೋಪಿಗಳ ವಿರುದ್ಧ ಹಲವು ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಬಾಲಕಿಯ ವೈದ್ಯಕೀಯ ವರದಿ ಬಂದ ಬಳಿಕ ಇನ್ನಷ್ಟು ವಿಭಾಗಗಳಲ್ಲಿ ಪ್ರಕರಣ ದಾಖಲಿಸಲು ಸಾಧ್ಯವೇ ಎಂಬ ಬಗ್ಗೆ ನೋಡುತ್ತೇವೆ ಎಂದು ಇದೇ ಸಂದರ್ಭ ಧುಲೆ ತಿಳಿಸಿದರು.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ