ಶಾಲೆಗೆ ನುಗ್ಗಿ ಮಕ್ಕಳ ಮೇಲೆ ಗುಂಡಿನ ದಾಳಿ | 8 ಮಕ್ಕಳು ಸಾವು 12 ಮಕ್ಕಳಿಗೆ ಗಂಭೀರ ಗಾಯ - Mahanayaka

ಶಾಲೆಗೆ ನುಗ್ಗಿ ಮಕ್ಕಳ ಮೇಲೆ ಗುಂಡಿನ ದಾಳಿ | 8 ಮಕ್ಕಳು ಸಾವು 12 ಮಕ್ಕಳಿಗೆ ಗಂಭೀರ ಗಾಯ

25/10/2020

ಕ್ಯಾಮರೂನ್: ಶಾಲೆಯೊಂದರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು 8 ಮಕ್ಕಳನ್ನು ಅಮಾನವೀಯವಾಗಿ ಹತ್ಯೆ ನಡೆಸಿದ ಘಟನೆ ಕ್ಯಾಮರೂನ್ ನ ಕುಂಬಾದ ದ್ವಿಭಾಷಿ ಶಾಲೆಯೊಂದರಲ್ಲಿ ನಡೆದಿದ್ದು, ಪ್ರತ್ಯೇಕತಾ ವಾದಿಗಳು ಈ ಕೃತ್ಯ ನಡೆಸಿದ್ದಾರೆ.

ಬಂದೂಕು ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದು ಶಾಲೆಗೆ ಬಂದ ಪ್ರತ್ಯೇಕತಾವಾದಿಗಳು ಮಕ್ಕಳನ್ನು ಅಮಾನವೀಯವಾಗಿ ಹತ್ಯೆ ನಡೆಸಿದ್ದಾರೆ.  ದಾಳಿಯ ಪರಿಣಾಮ 8 ಮಕ್ಕಳು ಸಾವನ್ನಪ್ಪಿದರೆ, 12ಕ್ಕೂ ಅಧಿಕ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂಗ್ಲಿಷ್ ಮಾತನಾಡುವ ಕ್ಯಾಮರೂನ್ ನ ಆಗ್ನೇಯ ಹಾಗೂ ನೈರುತ್ಯ ಪ್ರಾಂತ್ಯಗಳು, ದೇಶದ ಫ್ರೆಂಚ್ ಮಾತನಾಡುವ ಬಹುಸಂಖ್ಯಾತರ ವಿರುದ್ಧ ತಾರತಮ್ಯ ಎಸಗುತ್ತಿದೆ ಎನ್ನುವ ವಿಚಾರವು ಈ ಎರಡು ಪ್ರದೇಶಗಳಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಈ ವಾದ ಹಾಗೂ ಹೋರಾಟದಲ್ಲಿ  ಮೂರು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಮಹಾನಾಯಕ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ

https://t.me/joinchat/Q8oMxBZkakVUy7-VpEsIXQ

ಇತ್ತೀಚಿನ ಸುದ್ದಿ