ಅಕ್ರಮ ಚಿನ್ನ ಸಾಗಾಟ ಕ್ರಿಕೆಟಿಗ ಪಾಂಡ್ಯ ಪೊಲೀಸ್ ವಶಕ್ಕೆ - Mahanayaka

ಅಕ್ರಮ ಚಿನ್ನ ಸಾಗಾಟ ಕ್ರಿಕೆಟಿಗ ಪಾಂಡ್ಯ ಪೊಲೀಸ್ ವಶಕ್ಕೆ

13/11/2020

ಮುಂಬೈ: ಅಕ್ರಮ ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.


Provided by

ಕೃನಾಲ್ ಅವರು ಯುಎಇಯಿಂದ ಮುಂಬೈಗೆ ವಾಪಸ್ ಆದಾಗ ಡಿಆರ್ ಐ ಸಿಬ್ಬಂದಿ ಅವರನ್ನು ತಡೆದು ಪರಿಶೀಲನೆ ನಡೆಸಿದರು ಈ ವೇಳೆ ಅಕ್ರಮ ಚಿನ್ನ ಹಾಗೂ ಅಮೂಲ್ಯ ವಸ್ತುಗಳನ್ನು ಅವರು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕೃನಾಲ್ ಪಾಂಡ್ಯ ದುಬೈನಲ್ಲಿ ಮಂಗಳವಾರ ಕೊನೆಯಾಗಿರುವ ಐಪಿಎಲ್ ನಲ್ಲಿ ಐದನೇ ಬಾರಿಗೆ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದಾರೆ.

ಇತ್ತೀಚಿನ ಸುದ್ದಿ