ಅಮಾನವೀಯ: ತಾಯಿಯನ್ನೇ ಮರಕ್ಕೆ ಕಟ್ಟಿ ಹಾಕಿ ಜೀವಂತ ದಹಿಸಿದ ಕ್ರೂರ ಮಕ್ಕಳು - Mahanayaka
11:43 AM Sunday 15 - December 2024

ಅಮಾನವೀಯ: ತಾಯಿಯನ್ನೇ ಮರಕ್ಕೆ ಕಟ್ಟಿ ಹಾಕಿ ಜೀವಂತ ದಹಿಸಿದ ಕ್ರೂರ ಮಕ್ಕಳು

01/10/2024

ತಾಯಿಯನ್ನು ಮರಕ್ಕೆ ಕಟ್ಟಿ ಹಾಕಿ ಜೀವಂತ ದಹಿಸಿದ ಮಕ್ಕಳ ಕಥೆ ಇದು. 55 ವರ್ಷದ ಮಿನಟಿ ದೇಬ್ ನಾಥ್ ಎಂಬ ತಾಯಿಯನ್ನು ಮಕ್ಕಳೇ ಹತ್ಯೆ ಮಾಡಿದ ಈ ಘಟನೆ ನಡೆದಿರುವುದು ತ್ರಿಪುರದಲ್ಲಿ.

ತಾಯಿಯನ್ನು ಕೊಲೆಗೈದ ಈ ಕ್ರೌರ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಾಯಿಯ ಮಕ್ಕಳಾದ ರಣ್ ಬೀರ್, ಬಿಪ್ಲವ್ ಮತ್ತು ರಣ್ ಬೀರ್ ನ ಪತ್ನಿ ಈ ಕ್ರೌರ್ಯ ಎಸಗಿದ್ದಾರೆ. ಈ ಮೂವರನ್ನು ಆ ಬಳಿಕ ಬಂಧಿಸಲಾಗಿದೆ.

ಸುಟ್ಟು ಕರಕಲಾದ ದೇಹ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ತಲುಪಿದ ಪೊಲೀಸರು ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಈ ತಾಯಿಗೆ ಮೂವರು ಗಂಡು ಮಕ್ಕಳು. ಇವರ ಪತಿ 2022 ರಲ್ಲಿ ನಿಧನರಾಗಿದ್ದರು. ಕಿರಿಯ ಮಗನ ಜೊತೆ ಈ ತಾಯಿ ವಾಸಿಸುತ್ತಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ