ದೈವಾರಾಧನೆ ಕುರಿತು ನಟ ಚೇತನ್ ಹೇಳಿಕೆಗೆ ಡಾ.ವೀರೇಂದ್ರ ಹೆಗಡೆ ಪ್ರತಿಕ್ರಿಯೆ - Mahanayaka

ದೈವಾರಾಧನೆ ಕುರಿತು ನಟ ಚೇತನ್ ಹೇಳಿಕೆಗೆ ಡಾ.ವೀರೇಂದ್ರ ಹೆಗಡೆ ಪ್ರತಿಕ್ರಿಯೆ

veerendra hegade
22/10/2022

ದೈವಾರಾಧನೆ ಹಿಂದೂ ಧರ್ಮಕ್ಕಿಂತಲೂ ಪುರಾತನವಾದ ನಂಬಿಕೆ, ಇದು ಹಿಂದೂ ಧರ್ಮದ ಭಾಗವಲ್ಲ ಎಂಬ ನಟ ಚೇತನ್ ಅಹಿಂಸಾ ಅವರ ಹೇಳಿಕೆಗೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಪ್ರತಿಕ್ರಿಯಿಸಿದರು.

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಹೆಗಡೆ ಅವರಿಗೆ ಪತ್ರಕರ್ತರು ಚೇತನ್ ಅಹಿಂಸಾ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.

ಧರ್ಮದ ಭಾಗ ಹೌದೋ ಅಲ್ಲವೋ ಅನ್ನೋದು ನನಗೆ ಗೊತ್ತಿಲ್ಲ, ಆದರೆ ನಮ್ಮಲ್ಲಿ ವ್ಯಾಪಕವಾಗಿ ಇರುವಂತಹದ್ದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವ ಅರಿಯದೇ  ಮಾತನಾಡಿದರೆ, ಅದು ಬೇರೆಯಾಗುತ್ತದೆ ಎಂದರು.

ಧರ್ಮ ಅನ್ನೋವಂತಹದ್ದು, ಅದರ ಮೂಲವನ್ನು ಹುಡುಕುತ್ತಾ ಹೋದರೆ, ಎಲ್ಲಿಯೂ ಸಿಗುವುದಿಲ್ಲ. ಆದರೆ ನಮ್ಮ ನಂಬಿಕೆ, ನಡವಳಿಕೆ ಆಚರಣೆಗಳು  ಸ್ವಾಭಾವಿಕವಾಗಿ ಬೆಳೆದು ಬಂದಂತವು. ಇದನ್ನು ಬಿಟ್ಟಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆ ತಿಳಿದಿದ್ದಾರೆ ನನಗೆ ಗೊತ್ತಿಲ್ಲ. ನಮ್ಮ ಎರಡು ಜಿಲ್ಲೆಯಲ್ಲಿ ವ್ಯಾಪಕವಾಗಿರುವ ನಂಬಿಕೆ ಇದು. ಇದು ಸತ್ಯ. ನಾವು ಇವತ್ತು ಕೂಡ ದೈವಾರಾಧನೆ ಮಾಡುತ್ತೇವೆ. ದೈವದ ನುಡಿಗೆ ಗೌರವ ಕೊಡುತ್ತೇವೆ. ದೈವ ಮೈ ಮೇಲೆ ಬಂದಾಗ ಅದರ ಮಾತಿಗೆ ಗೌರವ ಕೊಡುತ್ತೇವೆ. ಇದನ್ನು ಧರ್ಮಕ್ಕೆ ಸೂಕ್ಷ್ಮತೆ ಮಾಡಿಕೊಂಡು ಹೋಗುವ ಅಗತ್ಯವಿಲ್ಲ ಅಂತ ಕಾಣುತ್ತದೆ.

ಇನ್ನೂ ಕಾಂತಾರ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಾಮಾನ್ಯವಾಗಿ ಬರುವಂತಹ ಚಿತ್ರಗಳಿಂತ ವಿಭಿನ್ನವಾಗಿ ಕರ್ನಾಟಕ ರಾಜ್ಯದ ಒಂದು ಭಾಗದ ವಿಭಿನ್ನವಾದ  ವಿಶೇಷವಾದ ಅನುಭವಗಳು, ನಂಬಿಕೆ ನಡವಳಿಕೆಗಳು, ದೈವಾರಾಧನೆಯಲ್ಲಿರುವ ವಿಶೇಷತೆ, ಸೂಕ್ಷ್ಮತೆಗಳನ್ನು  ರಿಷಬ್ ಶೆಟ್ಟಿಯವರು ಬಹಳ ಚೆನ್ನಾಗಿ ತೋರಿಸಿದ್ದಾರೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ