ಶಾಲಾ-ಕಾಲೇಜು ಆರಂಭ ದಿನಾಂಕದ ಗೊಂದಲಕ್ಕೆ ಸರ್ಕಾರ ತೆರೆ ಎಳೆಯಬೇಕು | ಮುಖ್ಯಮಂತ್ರಿಗೆ ದಲಿತ ವಿದ್ಯಾರ್ಥಿ ಸಂಘ ಮನವಿ
ಬೀದರ್: ಶಾಲಾ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ದಿನಕ್ಕೊಂದು ದಿನಾಂಕವನ್ನು ನೀಡುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಮೂಡಿದೆ. ಸರ್ಕಾರವು ತಕ್ಷಣವೇ ಸ್ಪಷ್ಟ ತೀರ್ಮಾನವನ್ನು ಪ್ರಕಟಿಸಬೇಕು ಎಂದು ದಲಿತ ವಿದ್ಯಾರ್ಥಿ ಒಕ್ಕೂಟ ಬೀದರ್ ಒತ್ತಾಯಿಸಿದೆ.
ನವೆಂಬರ್ 17 ರಿಂದ ಶಾಲಾ ಕಾಲೇಜುಗಳು ಆರಂಭವಾಗುತ್ತದೆ ಎಂದು ಸರ್ಕಾರದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇವಾಗ ಡಿಸೆಂಬರ್ 1 ರಿಂದ ಶಾಲಾ ಕಾಲೇಜುಗಳು ಆರಂಭ ಮಾಡುವುದಾಗಿ ಮತ್ತೆ ಚರ್ಚೆಗಳು ಆರಂಭವಾಗಿವೆ. ಸರ್ಕಾರವು ತಕ್ಷಣವೇ ಈ ಬಗ್ಗೆ ಸರಿಯಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈ ಎಲ್ಲ ಗೊಂದಲಗಳನಡುವೆ ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳ ಪ್ರವೇಶಕ್ಕಾಗಿ ಖಾಸಗಿ ಶಾಲಾ ಕಾಲೇಜುಗಳು ಪೋಷಕರಿಗೆ ಕರೆ, ಮೆಸೇಜ್ ಮಾಡಿ ಫೀಸ್ ಕಟ್ಟುವಂತೆ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದು ಅಂತಿಮ ತೀರ್ಮಾನವನ್ನು ಅದಷ್ಟುಬೇಗ ತಿಳಿಸಬೇಕೆಂದು. ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ದಲಿತ ವಿದ್ಯಾರ್ಥಿ ಸಂಘ ಮನವಿ ಪತ್ರ ಸಲ್ಲಿಸಿತು.
ಈ ಸಂಧರ್ಭದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಬೀದರ ಜಿಲ್ಲಾ ಸಂಚಾಲಕರಾದ ಸಂದೀಪ ಕಾಂಟೆ ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ ಜಿಲ್ಲಾ ಸಂಘಟನಾ ಸಂಚಾಲಕರಾದ ನರಸಿಂಗ ಸಾಮ್ರಾಟ, ಪ್ರಶಾಂತ ಸಾಧುನೂರ, ವಿಜಯಕುಮಾರ ಸಾಮ್ರಾಟ ಹಾಜರಿದ್ದರು.


























