ಅಪಘಾತಕ್ಕೀಡಾಗಿ ಮೃತಪಟ್ಟ ವ್ಯಕ್ತಿಯ  ಗುರುತು ಪತ್ತೆಗೆ ಪಿಎಸ್ ಐ ಸತೀಶ್ ನಾಯ್ಕ ಮನವಿ - Mahanayaka
12:26 PM Tuesday 27 - September 2022

ಅಪಘಾತಕ್ಕೀಡಾಗಿ ಮೃತಪಟ್ಟ ವ್ಯಕ್ತಿಯ  ಗುರುತು ಪತ್ತೆಗೆ ಪಿಎಸ್ ಐ ಸತೀಶ್ ನಾಯ್ಕ ಮನವಿ

10/11/2020

ಚಳ್ಳಕೆರೆ: ಹಿರೇಹಳ್ಳಿ ಹಾಗೂ ಬುಕ್ಲೂರಹಳ್ಳಿ ಗೇಟ್ ಮಧ್ಯದಲ್ಲಿ ಇರುವ ರುದ್ರಮ್ಮನಹಳ್ಳಿ ಗ್ರಾಮದ ಪೂಜಾರಿ ಓಬಣ್ಣ ಇವರ ಜಮೀನು ಮುಂದಿನ ಎನ್ ಹೆಚ್ 150(ಎ) ಟಾರ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುವ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.

ಈ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ  ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಶಂಕಿಸಲಾಗಿದೆ. ವ್ಯಕ್ತಿಯು ನೀಲಿ ಬಣ್ಣದ ಗೆರೆಗಳುಳ್ಳ ಶರ್ಟ್ ಧರಿಸಿದ್ದು, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಬಲಗೈಯಲ್ಲಿ ನೂಲೊಂದನ್ನು ಕಟ್ಟಿಕೊಂಡಿದ್ದಾನೆ.  ಮೃತನ ಹೆಸರು ವಿಳಾಸ ತಿಳಿದು ಬಂದಿಲ್ಲ.

ಈ ವ್ಯಕ್ತಿಯ ಮಾಹಿತಿ ಯಾರಿಗಾದರೂ ಇದ್ದಲ್ಲಿ ತಳಕು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ತಳುಕು ಪಿಎಸ್ ಐ ಸತೀಶ್ ನಾಯ್ಕ ಕೋರಿದ್ದಾರೆ. ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ : 08190 206634 ಮತ್ತು 9480803160ಗೆ ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ