ಭಯಾನಕ ಘಟನೆ: ಜೋಡಿಯನ್ನು ದೆಹಲಿಯಿಂದ ಅಪಹರಿಸಿ, ಮಧ್ಯಪ್ರದೇಶದಲ್ಲಿ ಹತ್ಯೆ ಮಾಡಿ ವಿಭಿನ್ನ ರಾಜ್ಯಗಳಲ್ಲಿ ಎಸೆದ ಪಾಪಿಗಳು - Mahanayaka

ಭಯಾನಕ ಘಟನೆ: ಜೋಡಿಯನ್ನು ದೆಹಲಿಯಿಂದ ಅಪಹರಿಸಿ, ಮಧ್ಯಪ್ರದೇಶದಲ್ಲಿ ಹತ್ಯೆ ಮಾಡಿ ವಿಭಿನ್ನ ರಾಜ್ಯಗಳಲ್ಲಿ ಎಸೆದ ಪಾಪಿಗಳು

police
17/09/2021

ದೆಹಲಿ: ದೆಹಲಿಯಿಂದ ದಂಪತಿಯನ್ನು ಅಪಹರಿಸಿ ಮಧ್ಯಪ್ರದೇಶದಲ್ಲಿ ಭೀಕರವಾಗಿ ಹತ್ಯೆ ಮಾಡಿ ವಿಭಿನ್ನ ರಾಜ್ಯಗಳಲ್ಲಿ ಅವರ ಮೃತದೇಹವನ್ನು ಎಸೆದ ಭಯಾನಕ ಹತ್ಯೆಯೊಂದು ನಡೆದಿದ್ದು, ಜನರನ್ನು ಈ ಹತ್ಯೆ ಬೆಚ್ಚಿಬೀಳಿಸಿದೆ.


Provided by

ಉತ್ತರ ಪ್ರದೇಶ ಮೂಲದ ದಂಪತಿಯನ್ನು ದೆಹಲಿಯಿಂದ ಅಪಹರಿಸಲಾಗಿದ್ದು, ಬಳಿಕ ಮಧ್ಯಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ. ಯುವತಿಯ ಮೃತದೇಹವನ್ನು ರಾಜಸ್ತಾನದಲ್ಲಿ ಎಸೆಯಲಾಗಿದ್ದು, ಆಕೆಯ ಪತಿಯ ದೇಹವನ್ನು ಮಧ್ಯಪ್ರದೇಶದಲ್ಲಿಯೇ ಎಸೆಯಲಾಗಿದೆ.

ಉತ್ತರ ಪ್ರದೇಶದ ಫಿರೋಜಾಬಾದ್ ನ ಸಿರಸಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಜಹಾಂಗೀರ್ ಪುರ ನಿವಾಸಿ ಯುವಕ ತನ್ನ ನೆರೆಯ ಮನೆಯ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾನೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಮನೆಯವರು ತೀವ್ರವಾಗಿ ಆಕ್ರೋಶಗೊಂಡಿದ್ದರು. ಇದೇ ಆಕ್ರೋಶದಲ್ಲಿ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


Provided by

ಆಗಸ್ಟ್ 5ರಂದು ಯುವಕನ ಮೃತದೇಹ ಪತ್ತೆಯಾಗಿದೆ. ಪೊಲೀಸರು ಅಪರಿಚಿತ ಮೃತದೇಹ ಎಂದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದಾದ ಬಳಿಕ ಆಗಸ್ಟ್ 10ರಂದು ಯುವಕನ ಮನೆಯವರು ಯುವಕ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಆ ಬಳಿಕ ಮೃತದೇಹವನ್ನು ಅವರು ಗುರುತಿಸಿದ್ದಾರೆ. ಈ ನಡುವೆ ಯುವತಿಯ ಮೃತದೇಹ ರಾಜಸ್ಥಾನದಲ್ಲಿ ದೊರಕಿದ್ದು, ಇವರಿಬ್ಬರ ವಯಸ್ಸಿನ ಆಧಾರದಲ್ಲಿ ಗುರುತು ಪತ್ತೆ ಮಾಡಲಾಗಿದೆ.

ಯುವತಿ ಮತ್ತು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳು.  ಯುವಕನ ಖಾಸಗಿ ಅಂಗವನ್ನು ಚಾಕುವಿನಿಂದ ಚುಚ್ಚಿ ಹಾನಿಗೊಳಿಸಿದ್ದಾರೆ. ಬಳಿಕ ಅತ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಝಾನ್ಸಿಗೆ ಹೋಗುವ ಹೆದ್ದಾರಿಯಲ್ಲಿ ಹತ್ಯೆ ಮಾಡಿ, ಮೃತದೇಹವನ್ನು ಮಧ್ಯಪ್ರದೇಶದಲ್ಲಿ ಎಸೆದಿದ್ದಾರೆ. ಬಾಲಕಿಯನ್ನು ಹಳದಿ ಬಣ್ಣದ ಹಗ್ಗ ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿ ರಾಜಸ್ಥಾನದ ಧೋಲ್ಪುರ್ ಪ್ರದೇಶದಲ್ಲಿ ಎಸೆದಿದ್ದರು.

ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು  ಮೊದಲು ಗಂಡು ಮತ್ತು ಹೆಣ್ಣಿನ ಎರಡೂ ಕುಟುಂಬಸ್ಥರ ಮೊಬೈಲ್ ಫೋನ್ ಲೊಕೇಶನ್ ಗಳನ್ನು ಜಾಲಾಡಿದ್ದಾರೆ. ಈ ವೇಳೆ ಹುಡುಗಿಯ ಕುಟುಂಬಸ್ಥರು, ಮೊದಲು ದೆಹಲಿಗೆ ಪ್ರಯಾಣಿಸಿ ಅಲ್ಲಿಂದ ಭಿಂದ್, ಗ್ವಾಲಿಯರ್ ಮತ್ತು ಧೋಲ್ಪುರ್ ಗೆ ಪ್ರಯಾಣಿಸಿರುವುದು ತಿಳಿದು ಬಂದಿದೆ. ಇದರಿಂದಾಗಿ ಆರೋಪಿಗಳ ಕೃತ್ಯ ಬಯಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ, ಹಲ್ಲೆ | ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರೆಸ್ಟ್!

ಅತ್ಯಾಚಾರ ಯತ್ನ ವಿಫಲವಾದಾಗ ವೃದ್ಧೆಯನ್ನು ಕೊಂದು ಮೃತದೇಹದ ಮೇಲೆಯೇ ಹೇಯ ಕೃತ್ಯ

ತಲೆಗೆ ಗುಂಡು ಹಾರಿಸಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ: ಆತ್ಮಹತ್ಯೆಯೋ?, ಕೊಲೆಯೋ? ಎಂಬ ಶಂಕೆ!

ಕ್ಲಬ್ ಹೌಸ್ ಹೌಸ್ ನಲ್ಲಿ ಇಂದು ಪ್ರಧಾನಿ ಮೋದಿ ಜನ್ಮ ದಿನಾಚರಣೆ: ಸಂಸದ ಪ್ರತಾಪ್ ಸಿಂಹ ಭಾಷಣ

ದೇವಾಲಯ ತೆರವು: ಸಂಸದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹಗೆ ಹಿಂದೂ ಕಾರ್ಯಕರ್ತರ ಮುತ್ತಿಗೆ

ಬಿಗ್ ಬ್ರೇಕಿಂಗ್ ನ್ಯೂಸ್: ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿ ಆತ್ಮಹತ್ಯೆ

ಶಾಕಿಂಗ್ ನ್ಯೂಸ್: ಭಾರತದಲ್ಲಿ ಪ್ರತಿದಿನ 80 ಕೊಲೆ, 77 ಅತ್ಯಾಚಾರ ಪ್ರಕರಣಗಳು ದಾಖಲಾಗ್ತಿವೆ!

ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು

ಇತ್ತೀಚಿನ ಸುದ್ದಿ