ಬೇಕರಿ ಮಾಲೀಕನ ಆತ್ಮಹತ್ಯೆ ಪ್ರಕರಣ: ಕುಟುಂಬ, ಅತ್ತೆ-ಮಾವನ ವಿಚಾರಣೆ
ಪತ್ನಿಯೊಂದಿಗೆ ಇದ್ದ ವಿರಸದಿಂದ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಮೂಲದ ಕೆಫೆ ಮಾಲೀಕ ಪುನೀತ್ ಖುರಾನಾ ಅವರ ಕುಟುಂಬ ಸದಸ್ಯರು ಮತ್ತು ಅತ್ತೆ ಮಾವಂದಿರನ್ನು ದೆಹಲಿ ಪೊಲೀಸರು ವಿಚಾರಣೆಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ನೇಣು ಬಿಗಿದುಕೊಳ್ಳುವ ಮೊದಲು ಖುರಾನಾ ತನ್ನ ಮೊಬೈಲ್ ಫೋನ್‌ನಲ್ಲಿ 54 ನಿಮಿಷಗಳ ವೀಡಿಯೊದಲ್ಲಿ ದಾಖಲಿಸಿದ ಹೇಳಿಕೆಗಳನ್ನು ಪರಿಶೀಲಿಸುವ ಪ್ರಯತ್ನದಲ್ಲಿ, ದೆಹಲಿ ಪೊಲೀಸರು ಖುರಾನಾ ಅವರ ಮನೆಗೆ ತಂಡವನ್ನು ಕಳುಹಿಸಲಿದ್ದಾರೆ ಮತ್ತು ಅವರ ಸ್ನೇಹಿತರನ್ನು ಸಹ ಪ್ರಶ್ನಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಖುರಾನಾ ಮಂಗಳವಾರ ದೆಹಲಿಯ ಮಾಡೆಲ್ ಟೌನ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖುರಾನಾ ಅವರ ಪತ್ನಿ ಮಣಿಕಾ ಪಹ್ವಾ ಮತ್ತು ಅವರ ಅತ್ತೆ ಮಾವಂದಿರು ಖುರಾನಾ ಅವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಅವರ ಕುಟುಂಬ ಆರೋಪಿಸಿದೆ.
ಖುರಾನಾ ಅವರ ಬೇಕರಿ ವ್ಯವಹಾರದಲ್ಲಿ ಪಾಲನ್ನು ನೀಡುವಂತೆ ಅವರ ಪತ್ನಿ ಒತ್ತಡ ಹೇರುತ್ತಲೇ ಇದ್ದರು. ಇದು ಅವರನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತ್ತು ಎಂದು ಖುರಾನಾ ಅವರ ಕುಟುಂಬ ಆರೋಪಿಸಿದೆ.
ಖುರಾನಾ ಅವರ ಕುಟುಂಬವು “ಅವರ ಹೆಂಡತಿಯ ಬಗ್ಗೆ ಅಸಮಾಧಾನಗೊಂಡಿದೆ” ಎಂದು ಹೇಳಿದೆ. ಅವರು ಫಾರ್ ಗಾಡ್ಸ್ ಕೇಕ್ ಬೇಕರಿ ಮತ್ತು ವುಡ್ಬಾಕ್ಸ್ ಕೆಫೆ ಎಂದು ಕರೆಯಲ್ಪಡುವ ಫುಡ್ ಜಾಯಿಂಟ್ ನ ಸಹ ಮಾಲೀಕರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj