ದಿಲ್ಲಿ ಸಿಎಂರನ್ನು ಬಂಧಿಸೋ ಸಾಧ್ಯತೆ: ಅರವಿಂದ್ ಕೇಜ್ರಿವಾಲ್ ಆರೋಪ
ದೆಹಲಿ ಮುಖ್ಯಮಂತ್ರಿ ಅತಿಶಿಯವರನ್ನು ಶೀಘ್ರದಲ್ಲೇ ನಕಲಿ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆ ಘೋಷಣೆಯಾದ ಅನಂತರ ಈ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕೇಜ್ರಿವಾಲ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಮಹಿಳಾ ಸಮ್ಮಾನ್ ಯೋಜನೆ ಮತ್ತು ಸಂಜೀವನಿ ಯೋಜನೆಯಿಂದ ಕೆಲವರು ನಲುಗಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅತಿಶಿಯನ್ನು ಕಪೋಕಲ್ಪಿತ ಪ್ರಕರಣದಲ್ಲಿ ಬಂಧಿಸಲು ಯೋಜನೆ ರೂಪಿಸಿದ್ದಾರೆ. ಅದಕ್ಕೂ ಮುನ್ನ ಆಪ್ ಹಿರಿಯ ನಾಯಕರ ಮೇಲೆ ದಾಳಿ ನಡೆಸಲಾಗುವುದು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ನಕಲಿ ಪ್ರಕರಣ ಸೃಷ್ಟಿ ಮಾಡಿ ಸಿಎಂ ಅತಿಶಿ ಯವರನ್ನು ಬಂಧಿಸಲು ಪ್ಲಾನ್ ಮಾಡಿದ್ದಾರೆ. ನಾವು ಸಿಎಂ ಅತಿಶಿ ಅವರೊಂದಿಗೆ ನಿಂತಿದ್ದೇವೆ ಮತ್ತು ನಾವು ಹೆದರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj